ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಲಿಂ. ಡಾ. ಅಭಿನವ ಅನ್ನದಾನ ಸ್ವಾಮೀಜಿಗಳು ಕ್ರಿಯಾಶೀಲ ವ್ಯಕ್ತಿತ್ವದವರಾಗಿದ್ದರು. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದ ಅವರು, ಶೈಕ್ಷಣಿಕ ಕ್ರಾಂತಿಯ ಹರಿಕಾರರೂ ಆಗಿದ್ದರು. ವಿಶೇಷವಾಗಿ ಹೆಣ್ಣುಮಕ್ಕಳ ಅಭ್ಯುದಯಕ್ಕಾಗಿ ಮಹಿಳಾ ವಿಚಾರ ಸಂಕಿರಣ, ಮಹಿಳೆಯರಿಗಾಗಿ ಬೆಳ್ಳಿ ತೇರು, ಮುತ್ತೆöÊದೆಯರಿಗೆ ಉಡಿ ತುಂಬುವುದರ ಮೂಲಕ ನಿರಂತರ ಕಾರ್ಯ ನಿರ್ವಹಿಸಿರುವ ಮಹಾ ಮಹಿಮರು ಎಂದು ಎಸ್‌ಎವಿವಿಪಿ ಸಮಿತಿಯ ಆಡಳಿತಾಧಿಕಾರಿ ಎನ್.ಆರ್. ಗೌಡರ ಹೇಳಿದರು.
ಪಟ್ಟಣದ ಅನ್ನದಾನ ವಿಜಯ ಬಾಲಕಿಯರ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ. ಅಭಿನವ ಅನ್ನದಾನ ಸ್ವಾಮೀಜಿಯವರ 3ನೇ ಪುಣ್ಯ ಸ್ಮರಣೋತ್ಸವದಲ್ಲಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ವಿಜ್ಞಾನ, ಗಣಿತ ಹಾಗೂ ಎಲ್ಲ ವಿಷಯಗಳ ಕುರಿತಾಗಿ ತಮ್ಮದೇ ಆದ ಸರಳ ಭಿತ್ತಿಪತ್ರಗಳು, ಮಾದರಿಗಳು, ಪ್ರಯೋಗಗಳನ್ನು ಪ್ರದರ್ಶಿಸಿ ಪುಣ್ಯಸ್ಮರಣೋತ್ಸವಕ್ಕೆ ಹೊಸ ಮೆರಗನ್ನು ತಂದುಕೊಟ್ಟು, ಸ್ವಾಮೀಜಿಯವರ ಶೈಕ್ಷಣಿಕ ಕಾಳಜಿಗೆ ಸಾಕ್ಷಿಯಾದರು.
ಮುಖ್ಯ ಶಿಕ್ಷಕ ಎಸ್.ಎನ್. ಹೂಲಗೇರಿ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಕಾರ್ಜುನಪ್ಪ ಮೆಣಸಗಿ, ನಿಂಗನಗೌಡ ಲಕ್ಕನಗೌಡ್ರ, ಎ.ಟಿ. ಮಳ್ಳಳ್ಳಿ, ಎಂ.ಎಸ್. ಅತ್ತಾರ, ಎಸ್.ಎಫ್. ಧರ್ಮಾಯತ, ಬಿ.ಡಿ. ಯರಗೊಪ್ಪ, ಎಸ್.ಶಿವಮೂರ್ತಿ, ಕೆ.ಸಿ. ಜೋಗಿ, ಆರ್.ಎಂ. ಗುಳಬಾಳ, ವಿ.ಕೆ. ಚುಳಕಿ, ಎಸ್.ಬಿ. ಕುರುಡಗಿ, ಬಸಮ್ಮ ಅಸುಂಡಿ ಸೇರಿದಂತೆ ಸಿಬ್ಬಂದಿ ಇದ್ದರು.