ಮಂಡ್ಯ: ಕಂಬದ ಮೇಲೆ ವಿದ್ಯುತ್ ಶಾಕ್ ನಿಂದ ಲೈನ್ ಮೆನ್ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಶಿವನಸಮುದ್ರದ (ಬ್ಲಫ್) ಬಳಿ ನಡೆದಿದೆ. ಘಟನೆಯಲ್ಲಿ ಸೆಸ್ಕ್ ಲೈನ್‌ಮೆನ್ ಹರ್ಷದ್(28) ಧಾರುಣ ಸಾವನ್ನಪ್ಪಿದ್ದು, ನಾಲ್ಕು ವರ್ಷದಿಂದ ಬೆಳಕವಾಡಿ ಸೆಸ್ಕ್ ಶಾಖೆಯಲ್ಲಿ ಲೈನ್ ಮೆನ್ ಆಗಿ ಕೆಲಸ ಮಾಡ್ತಿದ್ದನು.
ಇಂದು ಇಂಜಿನಿಯರ್ ನಂದೀಶ್ ಸೂಚನೆ ಮೇರೆಗೆ ವಿದ್ಯುತ್ ಕಂಬದ ಮೇಲೇರಿ ದುರಸ್ತಿ ಕೆಲಸ ಮಾಡುತ್ತಿದ್ದನು. ಈ ವೇಳೆ ವಿದ್ಯುತ್ ಶಾಕ್ ಹೊಡೆದಿದ್ದು, ಪರಿಣಾಮ ವಿದ್ಯುತ್ ಕಂಬದ ಮೇಲೆ ಪ್ರಾಣ ಬಿಟ್ಟಿದ್ದಾರೆ. 11ಕೆವಿ ಲೈನ್‌ನಲ್ಲಿ ಓವರ್ ಲೋಡ್‌ನಿಂದ ಪದೇ ಪದೇ ವಿದ್ಯುತ್ ಕಡಿತವಾಗುತ್ತಿತ್ತು. ಅಧಿಕಾರಿಗಳ ಸೂಚನೆಯಂತೆ ಮೂವರು ಲೈನ್‌ಮ್ಯಾನ್‌ಗಳು ಕೆಲಸ ಮಾಡುತ್ತಿದ್ದರು.
ಹೀಗಾಗಿ ಅರ್ಷದ್ ಅಲಿ, ಸುರೇಶ್, ಜಗದೀಶ್ ಫ್ಯೂಸ್ ತೆಗೆದು ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿದ ಪರಿಣಾಮ ವಿದ್ಯುತ್ ಕಂಬದಲ್ಲಿದ್ದ ಅರ್ಷದ್ ಅಲಿ ಶಾಕ್ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.