ಲೈನ್‌ಮ್ಯಾನ್ ನಿರ್ಲಕ್ಷ್ಯ: ಅಮಾಯಕ ರೈತ ಸಾವು!

0
Spread the love

ಹಾವೇರಿ:- ಜಿಲ್ಲೆಯ ಹಾನಗಲ್ ತಾಲೂಕಿನ ತುಮರಿಕೊಪ್ಪ ಬಳಿ ಲೈನ್ ಮ್ಯಾನ್ ನಿರ್ಲಕ್ಷ್ಯಕ್ಕೆ ಅಮಾಯಕ ರೈತನೊಬ್ಬ ಬಲಿಯಾಗಿರುವಂತಹ ಘಟನೆ ಜರುಗಿದೆ. ಕಾಶಿನಾಥ ಕಮ್ಮಾರ್ ಮೃತ ಯುವ ರೈತ.

Advertisement

ಅಮಾಯಕರ ಜೀವ ತೆಗೆಯುತ್ತಿರುವ ಲೈನ್ ಮ್ಯಾನ್ ವಜಾಗೊಳಿಸುವಂತೆ ರೈತರು ಬೀದಿಗಿಳಿದು ಹೋರಾಟ ಮಾಡಿದ್ದಾರೆ. ಪ್ರಾಣದ ಹಂಗು ತೊರೆದು ಮಳೆ, ಚಳಿ ಲೆಕ್ಕಿಸದೇ ವಿದ್ಯುತ್ ಪೂರೈಸುವ ಲೈನ್‌ಮ್ಯಾನ್‌ಗಳು ಜನರ ಪಾಲಿಗೆ ದೈವ ಸ್ವರೂಪಿಗಳೇ ಆಗಿದ್ದಾರೆ. ಮಳೆಗಾಲದಲ್ಲಿ ಮರ ಬಿದ್ದು, ತಂತಿ ಹರಿದು ಅನಾಹುತಗಳಾಗುವ ಮೊದಲೇ ಬಂದು ಕಂಬ ಏರಿ ದುರಸ್ತಿ ಮಾಡುವ ಲೈನ್‌ಮ್ಯಾನ್‌ಗಳನ್ನು ಸರ್ಕಾರವೇ ಪವರ್ ಮ್ಯಾನ್ ಅಂತ ಗೌರವದಿಂದ‌ ಬಿರುದು ನೀಡಿದೆ. ಆದರೆ ಇಲ್ಲೊಬ್ಬ ಐನಾತಿ ಲೈನ್ ಮ್ಯಾನ್ ಮಾಡಿದ ನಿರ್ಲಕ್ಷ್ಯಕ್ಕೆ ಮುಗ್ದ ರೈತನೊಬ್ಬ ಜೀವ ಬಿಟ್ಟಿದ್ದಾನೆ.

ತಿರುಪತಿ ಎಂಬ ಲೈನ್ ಮ್ಯಾನ್ ತಾನು ವಿದ್ಯುತ್ ಕಂಬ ಏರಿ ದುರಸ್ತಿ ಕೆಲಸ ಮಾಡುವುದನ್ನು ಬಿಟ್ಟು ರೈತ ಕಾಶಿನಾಥಗೆ ಕಂಬ ಹತ್ತಿಸಿ ವಿದ್ಯುತ್ ಕೆಲಸ ಮಾಡಿಸಲು ಮುಂದಾಗಿದ್ದಾನೆ. ಈ ವೇಳೆ ಕರೆಂಟ್ ಶಾಕ್ ತಗುಲಿ ಆಯ ತಪ್ಪಿ ಕಾಶಿನಾಥ ಕೆಳಗೆ ಬಿದ್ದು ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.


Spread the love

LEAVE A REPLY

Please enter your comment!
Please enter your name here