ಡ್ರಗ್ ಪೆಡ್ಲರ್ ಜೊತೆ ಕನ್ನಡ ಕಿರುತೆರೆ ನಟ-ನಟಿಯರ ಲಿಂಕ್: ತನಿಖೆಯಲ್ಲಿ ಹೊರ ಬಿತ್ತು ಸ್ಪೋಟಕ ಮಾಹಿತಿ

0
Spread the love

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ವಿದೇಶಿ ಡ್ರಗ್ ಪೆಡ್ಲರ್ ಜೊತೆ ಕನ್ನಡದ ಕೆಲ ಕಿರುತೆರೆ ನಟ- ನಟಿಯರು ನಿತಂತರ ಸಂಪರ್ಕದಲ್ಲಿದ್ದರು ಎಂಬುದು ಸಿಸಿಬಿ ಪೊಲೀಸರ ತನಿಖೆ ವೇಳೆ ಬಯಲಾಗಿದೆ. ಈ ಹಿಂದೆ ಸಹ ಡ್ರಗ್ ಜಾಲದಲ್ಲಿ ಸ್ಯಾಂಡಲ್ವುಡ್ ನಟ- ನಟಿಯರ ಹೆಸರು ಕೇಳಿ ಬಂದಿತ್ತು. ಹೀಗಾಗಿ ಪೊಲೀಸರು ಕೆಲ ನಟ-ನಟಿಯರನ್ನು ವಿಚಾರಣೆ ನಡೆಸಿದ್ದರು.ಈಗ ಮತ್ತೆ ಬಣ್ಣದ ಜಗತ್ತಿಗೆ ಡ್ರಗ್ ಜಾಲದ ನಂಟು ಇರುವುದು ಗೊತ್ತಾಗಿದೆ.

Advertisement

ಕೆಲ ದಿನಗಳ ಹಿಂದೆ ಡ್ರಗ್ ಪೆಡ್ಲರ್ ಬಂಧಿಸಿದ್ದ ಸಿಸಿಬಿ ಪೊಲೀಸರು ತನಿಖೆ ವೇಳೆ ಪೆಡ್ಲರ್ ಮೊಬೈಲ್ ಪರಿಶೀಲನೆ ವೇಳೆ ಬಣ್ಣದ ಲೋಕದ ನಂಟು ಬಯಲಾಗಿದೆ‌. ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಲಿಯೋನಾರ್ಡ್ ಒಕುವೊಡ್ಲಿ ಎಂಬಾತ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ 16 ಕೋಟಿ ಮೌಲ್ಯದ ಎಂಡಿಎಂಎ, 5 ಕೋಟಿ ಮೌಲ್ಯದ ಎಂಡಿಎಂಎ ಸೀಜ್ ಮಾಡಲಾಗಿತ್ತು. ಹೊಸ ವರ್ಷದ ಸಂಭ್ರಮಾಚಣೆ ವೇಳೆ ಡ್ರಗ್ ಮಾರಲು ಈತ ಪ್ಲಾನ್ ಮಾಡಿಕೊಂಡಿದ್ದ. ಇನ್ನೂ ಈತನ ಜೊತೆ ಕನ್ನಡದ ಕಿರುತೆರೆ ನಟ- ನಟಿಯರು ಸಂಪರ್ಕದಲ್ಲಿದ್ದು, ಅವರು ಸಹ ಡ್ರಗ್ ಸೇವಿಸಿರುವ ಅನುಮಾನ ವ್ಯಕ್ತವಾಗಿದೆ.


Spread the love

LEAVE A REPLY

Please enter your comment!
Please enter your name here