ಕಬಾಡಿಯವರ ಹೆಸರು ಮುಖ್ಯವಾಹಿನಿಗೆ ಬರಲಿ : ಸಾವಿತ್ರಿ ತಿಮ್ಮಾಪೂರ

0
``Literature in Home Language'' programme
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಸ್ವಾತಂತ್ರ‍್ಯ ಹೋರಾಟಗಾರರಾದ ಲಕ್ಷ್ಮಣಸಾ ಕಬಾಡಿಯವರು ಭಾರತದ ಸ್ವಾತಂತ್ರ‍್ಯಕ್ಕೆ ನೀಡಿದ ಕೊಡುಗೆ ಸ್ಮರಣೀಯವಾಗಿದೆ. ಕಷ್ಟ, ನಷ್ಟ, ನೋವುಗಳನ್ನು ಲೆಕ್ಕಿಸದೆ ಅವರು ಮುನ್ಸಿಪಾಲಿಟಿಯ ಕಟ್ಟಡದ ಮೇಲೆ ಹತ್ತಿ, ಅಲ್ಲಿದ್ದ ಬ್ರಿಟಿಷರ ಧ್ವಜವನ್ನು ಕಿತ್ತು, ಭಾರತದ ಧ್ವಜವನ್ನು ನೆಟ್ಟು, ಜೈಹಿಂದ್ ಎಂದು ಸಿಂಹ ಘರ್ಜನೆ ಮಾಡಿದರು. ಅಂದಿನಿಂದ ಅವರ ಮನೆತನಕ್ಕೆ `ಜೈಹಿಂದ್’ ಎನ್ನುವ ಹೆಸರು ಅನ್ವರ್ಥಕವಾಯಿತು ಎಂದು ಮುಳಗುಂದದ ಕನ್ನಡ ಶಿಕ್ಷಕಿ ಸಾವಿತ್ರಿ ತಿಮ್ಮಾಪೂರ ಹೇಳಿದರು.

Advertisement

ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಬಸವೇಶ್ವರ ನಗರದ ಖ್ಯಾತ ಗಾಯಕಿ, ಲೇಖಕಿ ಪದ್ಮಾ ಕಬಾಡಿ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ `ಮನೆಯಂಗಳದಲ್ಲಿ ಸಾಹಿತ್ಯ’ ಕಾರ್ಯಕ್ರಮದಲ್ಲಿ ಲಕ್ಷ್ಮಣಸಾ ಕಬಾಡಿಯವರ 46ನೇ ಪುಣ್ಯಾರಾಧನೆ ನಿಮಿತ್ತ ಅವರ ಬದುಕು ಮತ್ತು ಸಾಧನೆಯ ಕುರಿತು ಉಪನ್ಯಾಸ ನೀಡಿದರು.

ಅತಿಥಿಗಳಾಗಿ ಆಗಮಿಸಿದ್ದ ಗದಗ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಲಕ್ಷ್ಮಣಸಾ ಕಬಾಡಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಗದುಗಿನಲ್ಲಿ ಹಲವಾರು ಸ್ವಾತಂತ್ರ‍್ಯ ಹೋರಾಟಗಾರರು ಆಗಿ ಹೋಗಿದ್ದಾರೆ. ಅವರ ಸಾಲಿಗೆ ನಿಲ್ಲುವ ವ್ಯಕ್ತಿತ್ವ ಲಕ್ಷ್ಮಣಸಾ ಕಬಾಡಿ ಅವರದ್ದು.

ಮನೆಗೆ ಮಾತ್ರ ಸೀಮಿತವಾಗಿ ಅವರು ಉಳಿಯಬಾರದು. ಅವರ ಸಾಧನೆ ಸಾರ್ವಜನಿಕರಿಗೆ ಮುಟ್ಟುವಂತಾಗಲಿ, ಮುಂಬರುವ ದಿನಗಳಲ್ಲಿ ಅವರ ಪುಣ್ಯಸ್ಮರಣೆಯನ್ನು ಸಾರ್ವತ್ರಿಕವಾಗಿ ಆಚರಿಸುವ ವ್ಯವಸ್ಥೆ ಆಗಲಿ.

ತನ್ಮೂಲಕ ಅವರ ಹೆಸರು ಮುಖ್ಯವಾಹಿನಿಗೆ ಬರಲಿ ಎಂದು ಹೇಳಿದರು.

ಇನ್ನೋರ್ವ ಅತಿಥಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವಾನಂದ ಗಿಡ್ನಂದಿ ಮಾತನಾಡಿ, ಗದುಗಿನ ಸ್ಥಳ ಮಹಿಮೆ ಮತ್ತು ಸ್ವಾತಂತ್ರ‍್ಯಕ್ಕೆ ಗದುಗಿನ ಕೊಡುಗೆಯನ್ನು ನೆನೆದು, ಆ ಸಾಲಿನಲ್ಲಿ ನಿಲ್ಲಬೇಕಾದ ವ್ಯಕ್ತಿತ್ವ ಲಕ್ಷ್ಮಣಸಾ ಕಬಾಡಿ ಅವರದ್ದು. ಅವರನ್ನು ಪ್ರತಿವರ್ಷವೂ ನೆನಯುವ ಕಾರ್ಯವಾಗಬೇಕು ಎಂದು ನುಡಿದರು.

ಹಿರಿಯ ಸಾಹಿತಿಗಳಾದ ಡಾ. ರಾಜೇಂದ್ರ ಗಡಾದ, ಎಂ.ಡಿ. ಮಾದರ, ರತ್ನಾ ಬದಿ, ಭಾಗ್ಯ ಹುರಕಡ್ಲಿ, ರಮಾ ಚಿಗಟಗೇರಿ, ಪದ್ಮಾ ಕಬಾಡಿ ಕವನ ವಾಚನ ಮಾಡಿದರು.

ಆರಂಭದಲ್ಲಿ ಶಾಂತಾ ಬಾಕಳೆ ಪ್ರಾರ್ಥಿಸಿದರು. ಪದ್ಮಾ ಕಬಾಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎಸ್‌ಎಸ್‌ಕೆ ಸಮಾಜದ ಅಧ್ಯಕ್ಷೆ ಉಮಾ ಬೇವಿನಕಟ್ಟಿ, ಉಪಾಧ್ಯಕ್ಷರಾದ ಸ್ನೇಹಲತಾ ಕಬಾಡಿ, ಗದಗ ತಾಲೂಕಾ ಕಸಾಪ ಸಹಕಾರ್ಯದರ್ಶಿ ಪ್ರೊ. ಡಿ.ಎಸ್. ನಾಯಕ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ವಿಶ್ವನಾಥ ಬೇಂದ್ರೆ ವಂದಿಸಿದರು.

ಕಾರ್ಯಕ್ರಮದಲ್ಲಿ ಜಗನ್ನಾಥ ಕಬಾಡಿ, ದುಷ್ಯಂತಸಾ ಕಬಾಡಿ, ಲೀಲಾಬಾಯಿ ಬಾಕಳೆ, ಲಕ್ಷ್ಮಿದೇವಿ ಕಟ್ಟಿಮನಿ, ಕಸ್ತೂರಬಾಯಿ ಮೇಘರಾಜ್, ಸುಮಿತ್ರಾ ಕಬಾಡಿ, ವಿದ್ಯಾ ಕಬಾಡಿ, ಶ್ವೇತಾ ಕಬಾಡಿ, ಪೂಜಾ ಕಬಾಡಿ, ನೈನಾ ಕಬಾಡಿ, ಅಂಬಿಕಾ ಕಬಾಡಿ, ಅನೂಪ ಕಬಾಡಿ, ಅಕ್ಷಯ ಕಬಾಡಿ, ಸುಧಾ ಕಬಾಡಿ, ಭರತ ಕಬಾಡಿ, ಪ್ರವೀಣ ಕಬಾಡಿ, ಬೀನಾ ಕಟ್ಟಿಮನಿ, ವೀಣಾ ಕಬಾಡಿ, ಕಬಾಡಿ ಕಟುಂಬ, ಬಾಕಳೆ ಕುಟುಂಬ, ಎನ್.ಆರ್. ಖಟವಟೆ, ಎಸ್‌ಎಸ್‌ಕೆ ಸಮಾಜದ ಬಂಧು-ಬಾಂಧವರು ಹಾಜರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗದಗ ತಾಲೂಕಾ ಕಸಾಪ ಅಧ್ಯಕ್ಷೆ ಡಾ. ರಶ್ಮಿ ಅಂಗಡಿ ಮಾತನಾಡಿ, ಲಕ್ಷ್ಮಣಸಾ ಕಬಾಡಿ ಅವರು ಗದುಗಿನ ಹೆಮ್ಮೆ. ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ದುಡಿದ ಮತ್ತು ಮಡಿದ ಎಷ್ಟೋ ಜನರ ಹೆಸರುಗಳು ಇಂದು ಮರೆಯಾಗಿ ಹೋಗಿವೆ. ಜನಸಾಮಾನ್ಯರೂ ಕೂಡ ತಮ್ಮದೇ ಆದ ರೀತಿಯಲ್ಲಿ ತನು-ಮನ-ಧನ ನೀಡಿ, ಜೀವವನ್ನೂ ಲೆಕ್ಕಿಸದೇ ಹೋರಾಡಿದ್ದಾರೆ. ಅಂತವರು ಎಲೆಮರೆಯಲ್ಲೇ ಉಳಿದುಬಿಟ್ಟಿದ್ದಾರೆ. ಹೊಸ ತಲೆಮಾರಿನ ಸಂಶೋಧನೆಗಳು ಇಂತಹ ಸಾಮಾನ್ಯರತ್ತ ಹೊರಳಲಿ. ಕಬಾಡಿ ಅವರಂತಹ ವ್ಯಕ್ತಿ-ಶಕ್ತಿಗಳು ಸಮಾಜಕ್ಕೆ ಪರಿಚಯವಾಗಲಿ, ಆ ಮೂಲಕ ನಮ್ಮ ಮುಂದಿನ ಪೀಳಿಗೆಗೆ ನಮ್ಮ ದೇಶ-ಭಾಷೆ-ಹೋರಾಟ ಇವುಗಳ ಅರಿವು ಮೂಡುವಂತಾಗಲಿ ಎಂದು ನುಡಿದರು.

 


Spread the love

LEAVE A REPLY

Please enter your comment!
Please enter your name here