ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಲಿಟಲ್ ಹಾರ್ಟ್ಸ್ ಇಂಟರ್‌ನ್ಯಾಶನಲ್ ಹೈಸ್ಕೂಲ್ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಾಧಿಸಿದ್ದಾರೆ.
Advertisement
ಸುಮಿತಗೌಡ ನರಸಮ್ಮನವರ-ಶೇ. 99.52 ಅಂಕ ಪಡೆದು ರಾಜ್ಯಕ್ಕೆ 4ನೇ ಸ್ಥಾನ, ಜಿಲ್ಲೆಗೆ ದ್ವಿತೀಯ ಸ್ಥಾನ, ಅರ್ಪಿತಾ ಗುಂಜಳ-ಶೇ. 99.20 ಅಂಕ ಪಡೆದು ರಾಜ್ಯಕ್ಕೆ 6ನೇ ಸ್ಥಾನ ಪಡೆದುಕೊಂಡಿದ್ದಾರೆ. ನಾಗೇಶ್ವರ ಬಾಡಗಿ ಶೇ. 98.56, ಫಕ್ಕೀರಯ್ಯಾ ಹಿರೇಮಠ ಶೇ. 97.44, ಖುಷಿ ಕೊರಡೂರ ಶೇ. 92.16, ಅನುಶ್ರೀ ಗುಡ್ಡಣ್ಣವರ ಶೇ. 92, ಪ್ರಶಾಂತ ಇಮ್ಮಡಿ ಶೇ. 91.20, ಗೌರಿ ಬೆಟದೂರ ಶೇ. 90.40, ಕುಶಾಲ ಚಪ್ಪರಮನಿ ಶೇ. 89.76 ಅಂಕ ಪಡೆದುಕೊಂಡಿದ್ದಾರೆ.
ಶಾಲೆಯ ಒಟ್ಟು 54 ವಿದ್ಯಾರ್ಥಿಗಳಲ್ಲಿ 25 ಡಿಸ್ಟಿಂಕ್ಷನ್, 20 ಪ್ರಥಮ ಶ್ರೇಣಿ, 04 ದ್ವಿತೀಯ ಶ್ರೇಣಿ ಪಡೆಯುವುದರ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.