ಗದಗ:- ನಗರದ ವಿವೇಕಾನಂದ ನಗರ ಬಡಾವಣೆಯಲ್ಲಿ ರಾತ್ರಿ ವೇಳೆ ತೆಂಗಿನ ಮರ ಏರಿ ಯುವಕ ಹೈಡ್ರಾಮಾ ಸೃಷ್ಟಿಸಿದ ಘಟನೆ ಜರುಗಿದೆ.
ಬೆಳಗಾವಿ ಜಿಲ್ಲೆಯ ಗಬ್ಬೂರು ಗ್ರಾಮದ ನಿವಾಸಿ ಬಸವರಾಜ್ ಸೊಲ್ಲಾಪುರ ಎಂಬಾತ, ಕಳ್ಳನೆಂದು ಸ್ಥಳೀಯರು ಬೆನ್ನಟ್ಟುತ್ತಿದ್ದಾಗ ಭಯಗೊಂಡು ತೆಂಗಿನ ಮರಕ್ಕೆ ಏರಿ ಕುಳಿತಿದ್ದಾನೆ.
ಮಂಗಳವಾರ ಬೆಳಿಗ್ಗೆ 4 ಗಂಟೆಯ ವೇಳೆಗೆ ನಡೆದ ಈ ಘಟನೆ ಎರಡು ಗಂಟೆಗಳ ಕಾಲ ಮುಂದುವರಿಯಿತು. ಕೆಳಗೆ ಇಳಿಯಲಾಗದೆ ಪರದಾಡುತ್ತಿದ್ದ ಬಸವರಾಜ್ನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಬಂದು ರಕ್ಷಣಾ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಕೆಳಗೆ ಇಳಿಸಿದರು.
ನಂತರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆತನನ್ನು ಬೆಟಗೇರಿ ಬಡಾವಣೆ ಪೊಲೀಸರಿಗೆ ಒಪ್ಪಿಸಿದರು. ಬಸವರಾಜ್ನ ಹಿನ್ನಲೆ ಹಾಗೂ ಘಟನೆಯ ನಿಖರ ಕಾರಣ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.



