1 ಲಕ್ಷ ಲಂಚ ಸ್ವೀಕರಿಸೋ ವೇಳೆ “ಲೋಕಾ” ರೇಡ್: ಇಬ್ಬರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಅರೆಸ್ಟ್!

0
Spread the love

ಬೀದರ್:- 1 ಲಕ್ಷ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಇಬ್ಬರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಲೋಕಾ ಬಲೆಗೆ ಬಿದ್ದಿರುವ ಘಟನೆ ಬೀದರ್ ನಲ್ಲಿ ಜರುಗಿದೆ.

Advertisement

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕೋಸಮ್ ಗ್ರಾಮ ಪಂಚಾಯತಿಯ ಪಿಡಿಒ ಆಗಿರುವ ರಾಹುಲ್ ಹಾಗೂ ಜೆಇ ಆಗಿರುವ ಸಿದ್ರಾಮೇಶ್ವರ್ ಅವರು ಲೋಕಾ ಬಲೆಗೆ ಬಿದ್ದಿದ್ದಾರೆ.

24 ಲಕ್ಷ ರೂ. ಬಿಲ್‌ ಪಾವತಿ ಬಳಿಕ ಕಮಿಷನ್ ರೂಪದಲ್ಲಿ ಒಂದು ಲಕ್ಷ ಹಣ ಪಡೆಯುವ ವೇಳೆ ಲೋಕಾ ಬಲೆಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

ಇವರು 24 ಲಕ್ಷ ಬಿಲ್‌ಗೆ 2.55 ಲಕ್ಷ ಬೇಡಿಕೆಯಿಟ್ಟಿದ್ದರು. ಈ ಪೈಕಿ ಮುಂಗಡವಾಗಿ ಒಂದು ಲಕ್ಷ ರೂ. ಪಡೆಯುತ್ತಿದ್ದ ವೇಳೆ ಲೋಕಾ ಬಲೆಗೆ ಬಿದ್ದಿದ್ದಾರೆ. ಕೋಸಮ್ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಕೆಲಸ ಮಾಡಿದ್ದ ಗುತ್ತಿಗೆದಾರ‌‌ ಅರವಿಂದ ಭಾಲ್ಕೆ ಎನ್ನುವವರ ದೂರು ಆಧರಿಸಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದರು. ನೌಬಾದ್‌ನ ಆಟೋ‌ ನಗರ, ಹಲ್ಬರ್ಗಾ ಬಸ್ ಸ್ಟ್ಯಾಂಡ್ ಬಳಿ ಕಮಿಷನ್ ಪಡೆಯುತ್ತಿದ್ದ ವೇಳೆ ಲೋಕಾ ದಾಳಿ ಮಾಡಿದೆ.

ಡಿಎಸ್ಪಿ‌ ಹನುಮಂತರಾಯ್ ಹಾಗೂ ಇನ್ಸ್‌ಪೆಕ್ಟರ್ ಬಾಬಾಸಾಹೇಬ್ ಪಾಟೀಲ್‌‌ ನೇತೃತ್ವದಲ್ಲಿ ಎರಡು ತಂಡಗಳಾಗಿ ಪ್ರತ್ಯೇಕ ದಾಳಿ ಮಾಡಲಾಗಿದ್ದು, ಕಮಿಷನ್ ಪಡೆಯುವಾಗ ರೆಡ್‌ಹ್ಯಾಂಡ್ ಆಗಿ ಅಧಿಕಾರಿಗಳು ಸಿಕ್ಕಿ ಬಿದ್ದಿದ್ದಾರೆ. ದಾಳಿ ವೇಳೆ ಇಬ್ಬರು ಅಧಿಕಾರಿಗಳಿಂದ ಒಂದು ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here