Bengaluru: ಅಬಕಾರಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ: ಡ್ರಗ್ಸ್, ಗಾಂಜಾ, ಲಿಕ್ಕರ್​​​ ಬಾಟಲ್​ ಪತ್ತೆ!

0
Spread the love

ಬೆಂಗಳೂರು:- ನಗರದ ಅಬಕಾರಿ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ ಘಟನೆ ಜರುಗಿದೆ. ದಾಳಿ ವೇಳೆ ಡ್ರಗ್ಸ್, ಗಾಂಜಾ, ಲಿಕ್ಕರ್​​​ ಬಾಟಲ್​ ಪತ್ತೆಯಾಗಿದೆ.

Advertisement

ಯಶವಂತಪುರ, ಬ್ಯಾಟರಾಯನಪುರ ಕಚೇರಿಗಳಲ್ಲಿ ಸಿಗರೇಟ್​ನ ತಂಬಾಕು ತೆಗೆದು ಗಾಂಜಾ ತುಂಬಿಟ್ಟಿದ್ದು ಪತ್ತೆಯಾಗಿದ್ದು, ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್, ಉಪಲೋಕಾಯುಕ್ತ ಬಿ. ವೀರಪ್ಪ ಪರಿಶೀಲನೆ ನಡೆಸಿದ್ದಾರೆ.

ಯಶವಂತಪುರ ಮತ್ತು ಬ್ಯಾಟರಾಯನಪುರ ಅಬಕಾರಿ ಕಚೇರಿಗಳಲ್ಲಿ ಖುದ್ದು ಪರಿಶೀಲನೆಗೆ ಲೋಕಾಯುಕ್ತ ನ್ಯಾಯಮೂರ್ತಿ.ಬಿ‌.ಎಸ್ ಪಾಟೀಲ್ ಅವರು ಸರ್ಚ್ ವಾರಂಟ್‌ಗಳನ್ನು ಹೊರಡಿಸಿದ್ದರು.

ಯಶವಂತಪುರ ಮತ್ತು ಬ್ಯಾಟರಾಯನಪುರ ಅಬಕಾರಿ ಕಚೇರಿಗಳಲ್ಲಿ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಖುದ್ದು ಪರಿಶೀಲನೆಗೆ ವಾರೆಂಟ್ ಹೊರಡಿಸಲಾಗಿತ್ತು.

ಅದರಂತೆ ಸಂಜೆ ವೇಳೆ ಯಶವಂತಪುರ ಮತ್ತು ಬ್ಯಾಟರಾಯನಪುರ ಅಬಕಾರಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ಮಾಡಿದ್ದು, ಈ ವೇಳೆ ಸರ್ಕಾರಿ ಕಚೇರಿಗಳಲ್ಲೇ ಗಾಂಜಾ ಮತ್ತು ಮದ್ಯದ ಬಾಟಲಿಗಳು ಪತ್ತೆಯಾಗಿವೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್, ಇವತ್ತು 61 ಅಬಕಾರಿ ಅಧಿಕಾರಿಗಳ ಮೇಲೆ ಸರ್ಚ್ ಮಾಡಲಾಗಿದೆ. ಲೊಕಾಯುಕ್ತ ಕಚೇರಿಗೆ ಸುಮಾರು 132 ದೂರುಗಳು ಬಂದಿವೆ.

ಅದೆಲ್ಲವನ್ನೂ ವಿಚಾರ ಮಾಡಲಾಗಿ ಜೊತೆಗೆ ಅಬಕಾರಿ ಕಚೇರಿಯ ವ್ಯವಹಾರಗಳ ಬಗ್ಗೆ ಪರಿಶೀಲನೆ ನಡೆಸಲು ಸರ್ಚಿಂಗ್ ಮಾಡಲಾಗುತ್ತಿದೆ.

ಎಸ್ಪಿಗಳು, ಡಿವೈಎಸ್ಪಿಗಳು, ಇನ್ಸ್ ಪೆಕ್ಟರ್ ಗಳು, ಜ್ಯೂಡಿಷಲ್ ಆಫೀಸರ್ಸ್ ಹಾಗೂ ನಾನು ಮತ್ತು ಉಪಲೋಕಾಯುಕ್ತರು ಬೆಂಗಳೂರಿನ ಎಲ್ಲಾ ಕಡೆ ತುಂಬಾ ಓಡಾಡುತ್ತಿದ್ದು, ಪರಿಶೀಲನೆ ವೇಳೆ ಹಲವಾರು ಲೋಪದೋಷಗಳು ಕಂಡು ಬಂದಿವೆ ಎಂದರು.


Spread the love

LEAVE A REPLY

Please enter your comment!
Please enter your name here