ಮುಂಡರಗಿಯ ಹೆಸ್ಕಾಂ ಕಚೇರಿಯಲ್ಲಿ ನಡೆದ ದಾಳಿ- ಸರಕಾರಿ ಶುಲ್ಕಕ್ಕಿಂತ ಹೆಚ್ಚುವರಿ ನಾಲ್ಕು ಸಾವಿರ ಲಂಚ ಕೇಳಿದ್ದ ಆರೋಪಿ…
ಗದಗ: ಜಮೀನಿನ ಪಂಪ್‌ಸೆಟ್ ಆರ್ ಆರ್ ನಂಬರ್ ಮಾಡಿಕೊಡಲು ಸರಕಾರಿ ಶುಲ್ಕಕ್ಕಿಂತ ಹೆಚ್ಚುವರಿ ಹಣ ಕೇಳಿದ್ದ ಹೆಸ್ಕಾಂ ಗುತ್ತಿಗೆದಾರನೊಬ್ಬ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ಜರುಗಿದೆ. ಮುಂಡತಗಿಯ ಹೆಸ್ಕಾಂ ಕಚೇರಿಯಲ್ಲಿ ಈ ದಾಳಿ ನಡೆದಿದೆ.
ಹೆಸ್ಕಾಂ ಗುತ್ತಿಗೆದಾರ ಜಿಲ್ಲೆಯ ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದ ಸಿದ್ದನಗೌಡ ಪಾಟೀಲ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ವ್ಯಕ್ತಿ.

ಮುಂಡರಗಿ ತಾಲೂಕಿನ ಜಂತ್ಲಿ ಶಿರೂರು ಗ್ರಾಮದ ಬಿ ಕೆ ಗೌರಿ ಎಂಬುವವರು ತಮ್ಮ ಸಂಬಂಧಿಕರ ಜಮೀನಿನ
ಪಂಪ್‌ಸೆಟ್ ಗೆ ಆರ್.ಆರ್. ನಂಬರ್ ಮಾಡಿಕೊಡಲು ಹೆಸ್ಕಾಂ ಗುತ್ತಿಗೆದಾರ ಸಿದ್ದನಗೌಡ ಪಾಟೀಲ ಸರ್ಕಾರಿ ಶುಲ್ಕಕ್ಕಿಂತ ಹೆಚ್ಚುವರಿಯಾಗಿ ನಾಲ್ಕು ಸಾವಿರ ಲಂಚ ಕೇಳಿದ್ದರು ಎನ್ನಲಾಗಿದೆ.
ಈ ಕುರಿತು ಬಿ.ಕೆ. ಗೌರಿ ಗದಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ಮಾಡಿ ಹೆಸ್ಕಾಂ ಗುತ್ತಿಗೆದಾರನನ್ನು ಬಂಧಿಸಿದ್ದಾರೆ.