ಬೆಂಗಳೂರು:- ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸರ್ಚ್ ವಾರಂಟ್ ವಿಚಾರಕ್ಕೆ ಸಚಿವ ಬೈರತಿ ಸುರೇಶ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಲೋಕಾಯುಕ್ತ ಸರ್ಚ್ ವಾರಂಟ್ ವಿಚಾರದಲ್ಲಿ ನಾನೇನು ತಪ್ಪು ಮಾಡಿಲ್ಲ. ಐ ಡೋಂಟ್ ಕೇರ್. ಸರ್ಚ್ ವಾರಂಟ್ ಕೊಟ್ಟವರು ಯಾರು? ದಾಳಿ ಮಾಡಬೇಡಿ ಅಂತ ಲೋಕಾಯುಕ್ತವನ್ನು ತಡೆದವರು ಯಾರು? ಲೋಕಾ ಮೇಲೆ ಯಾರಾದ್ರೂ ಪ್ರೆಷರ್ ಹಾಕಲು ಆಗುತ್ತಾ? ಸಿಎಂ ಮೇಲೆ ಲೋಕಾಯುಕ್ತ ನೋಟಿಸ್ ಕೊಟ್ಟಿಲ್ವಾ? ಸಿಎಂ ಪತ್ನಿ ಪಾರ್ವತಿಗೆ, ಬಾಮೈದನಿಗೆ, ಅಧಿಕಾರಿಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡಿಲ್ವಾ? ಏನು ನಡೆಯುತ್ತಿದೆ ನನಗೆ ಅರ್ಥವಾಗುತ್ತಿಲ್ಲ ಎಂದರು.
ನಮ್ಮ ಕೆಳಗಡೆ ಲೋಕಾಯುಕ್ತ ಇದೆಯಾ? ಯಾವ ಐಎಎಸ್ ಅಧಿಕಾರಿ ಯಾಕೆ ಫೈಲ್ ತೆಗೆದುಕೊಂಡು ಹೋಗಿದ್ದಾರೆ? ಅದಕ್ಕೇನಾದರೂ ಸಾಕ್ಷಿ ಇದೆಯಾ? ದೂರುದಾರನ ಪ್ರಶ್ನೆ ಏನು? ಲೋಕಾಯುಕ್ತ ಸರಿಯಾಗಿ ಕೆಲಸ ಮಾಡಿಲ್ಲ ಅಂದರೆ ಅವರನ್ನು ಹೋಗಿ ಕೇಳಲಿ. ದಿನ ಬೆಳಗಾದರೆ ತನಿಖೆಯೊಳಗೆ ಮೂಗು ತೂರಿಸೋದು ಸರಿಯಾ? ನಮ್ಮದೇ ಅಧಿಕಾರಿ ಮೇಲೆ ನಂಬಿಕೆ ಇಲ್ಲ ಅಂದರೆ ಇನ್ಯಾರಿಂದ ತನಿಖೆ ಮಾಡಿಸಬೇಕು? ನಾನೇನು ತಪ್ಪು ಮಾಡಿಲ್ಲ, ಐ ಡೋಂಟ್ ಕೇರ್ ಎಂದು ಹೇಳಿದ್ದಾರೆ.