ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕರ ದಾಳಿಯ ಬಗ್ಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ಘಟನೆಯನ್ನು ದೇಶ, ವಿದೇಶದ ಗಣ್ಯರು ಖಂಡಿಸಿದ್ದು ಇದೀಗ ಸ್ಯಾಂಡಲ್ ವುಡ್ ನಟ ವಿನೋದ್ ರಾಜ್ ಘಟನೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇಶದ ಪರಿಸ್ಥಿತಿ ನೋಡಿದ್ರೆ, ಯುದ್ಧ ಮಾಡೋದು ಶ್ರೇಷ್ಠ ಅಲ್ಲ ಅಂತ ಅನಿಸುತ್ತದೆ ಎಂದು ವಿನೋದ್ ರಾಜ್ ಹೇಳಿದ್ದಾರೆ.
ನಮ್ಮ ವಿಶ್ವದಲ್ಲಿ ಇರೋದು ಒಂದೇ ಹಿಂದೂಸ್ಥಾನ. ನಮ್ಮ ಹಿಂದುಸ್ಥಾನದಲ್ಲಿ ನಮಗೇ ಸ್ಥಾನ ಇಲ್ಲ ಅನ್ನುವಂತಹ ಪರಿಸ್ಥಿತಿ ಎದುರಾಗಬಾರದು. ನಮ್ಮ ಸಂಸ್ಕೃತಿ, ಸಂಸ್ಕಾರ ಉಳಿಯಬೇಕು. ಅನುಕಂಪ, ವಾತ್ಸಲ್ಯ ಭಾರತ ಮಣ್ಣಿಗೆ ಮಾತ್ರ ಚೆನ್ನಾಗಿ ಗೊತ್ತಿದೆ. ಬೇರೆ ಮಣ್ಣಿಗೆ ಅದು ಗೊತ್ತಿಲ್ಲ. ದೇಶದ ಪರಿಸ್ಥಿತಿ ನೋಡಿದ್ರೆ, ಯುದ್ಧ ಮಾಡೋದು ಶ್ರೇಷ್ಠ ಅಲ್ಲ ಅಂತ ಅನಿಸುತ್ತದೆ. ಅದನ್ನು ಅಲ್ಲೇ ಸರಿ ಮಾಡಬೇಕು. ಈ ಸೆಕ್ಯೂರಿಟಿನ ನಾವೇ ಸರಿ ಮಾಡಿಕೊಳ್ಳಬೇಕು ಎಂದಿದ್ದಾರೆ.
ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ಬಲಿಯಾಗಿದ್ದಾರೆ. ಅವರಲ್ಲಿ ಮೂವರು ಕರ್ನಾಟಕ ಮೂಲದವರು. ಇನ್ನೂ ಹಲವರು ಘಟನೆಯಲ್ಲಿ ಗಾಯಗೊಂಡಿದ್ದಾರೆ.