HomeGadag Newsಬೇಡಿದ್ದನ್ನು ನೀಡುವ ಭಗವಂತ ದತ್ತಾತ್ರೇಯ: ಸುಹಾಸ ಕುಲಕರ್ಣಿ

ಬೇಡಿದ್ದನ್ನು ನೀಡುವ ಭಗವಂತ ದತ್ತಾತ್ರೇಯ: ಸುಹಾಸ ಕುಲಕರ್ಣಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನಾವು ಬೇಡಿದ್ದನ್ನು ನೀಡುವ ಭಗವಂತ ಯಾರಾದರೂ ಇದ್ದರೆ ಅದು ದತ್ತ ಮಹಾರಾಜರು ಮಾತ್ರ. ದತ್ತಾತ್ರೇಯನನ್ನು ಅನನ್ಯ ಭಾವದಿಂದ ಪೂಜಿಸಿದರೆ ನಮ್ಮ ಇಷ್ಟಗಳೆಲ್ಲವೂ ನೆರವೇರುತ್ತವೆ ಎಂದು ಸುಹಾಸ ಕುಲಕರ್ಣಿ ಹೇಳಿದರು.

ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಬ್ರಹ್ಮ ಸಮಾಜದವರು ಶನಿವಾರ ಆಚರಿಸಿದ ಶ್ರೀ ದತ್ತ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದತ್ತಾತ್ರೇಯರು ಪೀಠಾಪುರದಲ್ಲಿ, ಕುರಗಡ್ಡಿಯಲ್ಲಿ, ಗಾಣಗಾಪುರದಲ್ಲಿ ತಮ್ಮ ಅವತಾರದ ಅನೇಕ ಲೀಲೆಗಳನ್ನು ತೋರಿದರು. ನಿತ್ಯವೂ ಯಾರು ಶ್ರೀ ಗುರು ಚರಿತ್ರೆಯನ್ನು ಪಠಿಸುತ್ತಾರೆಯೋ ಅವರ ಸಂಕಷ್ಟಗಳು ದೂರವಾಗುತ್ತವೆ. ಬ್ರಹ್ಮ, ವಿಷ್ಣು, ಮಹೇಶ್ವರರು ಒಟ್ಟಾಗಿರುವ ಅವತಾರವೇ ಶ್ರೀ ಗುರು ದತ್ತಾತ್ರೇಯನಾಗಿದ್ದಾನೆ. ಒಮ್ಮೆ ದತ್ತಾತ್ರೇಯನಿಗೆ ನಾವು ಶರಣು ಹೋದರೆ ಮೂವರಿಗೂ ನಾವು ಶರಣು ಹೋದಂತೆ. ಆದ್ದರಿಂದ ಶ್ರೀ ಗುರು ದತ್ತಾತ್ರೇಯನ ಪೂಜೆ ನಮಗೆ ಎಲ್ಲವನ್ನೂ ನೀಡುತ್ತದೆ ಎಂದು ಹೇಳಿದರು.

ಸುಮಂಗಲೆಯರು ಶ್ರೀ ಗುರು ದತ್ತಾತ್ರೇಯನನ್ನು ತೊಟ್ಟಿಲಲ್ಲಿ ಹಾಕಿ ಜೋಗುಳ ಹಾಡಿದರು. ಈ ಸಂದರ್ಭದಲ್ಲಿ ಎ.ಜಿ. ಕುಲಕರ್ಣಿ, ಶೇಷಗಿರಿ ಕುಲಕರ್ಣಿ, ಆನಂದ ಕುಲಕರ್ಣಿ, ಪ್ರಶಾಂತ ಗ್ರಾಮಪುರೋಹಿತ, ಆರ್.ಡಿ. ಕುಲಕರ್ಣಿ, ಬಿ.ಎಲ್. ಕುಲಕರ್ಣಿ, ಅಜಿತ ಕುಲಕರ್ಣಿ, ಪ್ರಕಾಶ ಕಾಳೆ, ಆರ್.ಡಿ. ಕುಲಕರ್ಣಿ, ಗಿರೀಶ ಕುಲಕರ್ಣಿ, ನಾಗರಾಜ ನಾಡಿಗೇರ, ನಾಗೇಶಭಟ್ಟ ಗ್ರಾಮಪುರೋಹಿತ, ಪ್ರಕಾಶ ಕಾಳೆ, ಜ್ಯೋತಿ ನಾಡಿಗೇರ, ರೂಪಾ ಗ್ರಾಮಪುರೋಹಿತ, ವಿಮಲಾಬಾಯಿ ಗ್ರಾಮಪುರೋಹಿತ, ಶೋಭಾ ಕುಲಕರ್ಣಿ, ವನಜಾಕ್ಷಿ ಕುಲಕರ್ಣಿ, ಪ್ರತೀಕ್ಷಾ ಕುಲಕರ್ಣಿ, ಶೋಭಾ ಸೂರಭಟ್ಟನವರ, ಶ್ರೇಯಾ ನಾಡಿಗೇರ, ಅರ್ಚನಾ ಕುಲಕರ್ಣಿ, ಲಕ್ಷ್ಮಿ ಗ್ರಾಮಪುರೋಹಿತ, ವಾಣಿ ಕುಲಕರ್ಣಿ, ಪರಿಮಳಾ ಗ್ರಾಮಪುರೋಹಿತ, ಸನ್ಮತಿ ಸದರಜೋಷಿ, ಜಯಶ್ರೀ ಗ್ರಾಮಪುರೋಹಿತ, ಪೂಜಾ ಗ್ರಾಮಪುರೋಹಿತ, ದೀಪಾ ಕುಲಕರ್ಣಿ, ಪ್ರಭಾ ರಾಯಭಟ್ಟನವರ, ಪ್ರಿಯಾ ಕುಲಕರ್ಣಿ, ಅನುಪಮಾ ಗ್ರಾಮಪುರೋಹಿತ ಮುಂತಾದವರಿದ್ದರು.

ದೇವಸ್ಥಾನದ ಅರ್ಚಕ ಶ್ರೀವಲ್ಲಭಭಟ್ಟ ಸದರಜೋಷಿ ಶ್ರೀ ಗುರು ದತ್ತಾತ್ರೇಯನ ಲೀಲೆಗಳನ್ನು ವಿವರಿಸಿ, ನರೇಗಲ್ಲದ ಶ್ರೀ ಗುರು ದತ್ತಾತ್ರೇಯನೂ ಸಹ ಭಕ್ತ ವತ್ಸಲನಾಗಿದ್ದು, ಭಕ್ತರ ಎಲ್ಲ ಅಭೀಷ್ಟೆಗಳನ್ನು ನೆರವೇರಿಸುವಲ್ಲಿ ಎಂದಿಗೂ ಮುಂಚೂಣಿಯಲ್ಲಿದ್ದಾನೆ ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!