ಚಾಮರಾಜನಗರ: ಲಾರಿ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿ ಚಾಲಕ ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ಗಡಿ ಭಾಗವಾದ ಗರಿಕೆಕಂಡಿ ಹಾಗೂ ಬರಗೂರು ಸಮೀಪ ನಡೆದಿದೆ. ಟಿ.ನರಸೀಪುರ ಮೂಲದ ನಯುಂ (35) ಮೃತ ದುರ್ಧೈವಿಯಾಗಿದ್ದು,
ತಮಿಳುನಾಡಿನ ತೂತುಕುಡಿಯಿಂದ ಮೈಸೂರು ಕಡೆಗೆ ರಸಗೊಬ್ಬರ ತುಂಬಿಕೊಂಡು ಬರುತ್ತಿದ್ದಾಗ ಲಾರಿ ಗರಿಕೆಕಂಡಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಹಿನ್ನಲೆ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ತಮಿಳುನಾಡು ರಾಜ್ಯದ ಬರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



