ಹಾವೇರಿ:- ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಪ್ರೀತಿಸಿದವಳು ಕೈ ಕೊಟ್ಟಿದ್ದಕ್ಕೆ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.
ಶಶೀಧರ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಮೃತ ಯುವಕ ಶಶೀಧರ್, ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ನಿವಾಸಿಯಾದ ಚಂದ್ರಕಲಾ ಅವರನ್ನು ಪ್ರೀತಿ ಮಾಡುತ್ತಿದ್ದ. ಇವರಿಬ್ಬರು ಹಲವು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪಾರ್ಕ್, ದೇವಸ್ಥಾನ ಅಂತ ಗಲ್ಲಿ ಗಲ್ಲಿ ಸುತ್ತಾಡಿ ಕೊನೆಗೆ ಜಾತಿ ಬೇರೆ ಎಂದು ಕೈಕೊಟ್ಟಿದ್ದಾಳೆ. ಪ್ರಿಯಕರ ಎಷ್ಟೇ ಗೋಗರಿದರು ಪ್ರೀತಿ ನಿರಾಕರಿಸಿದಕ್ಕೆ ಕೊನೆಗೆ ನೇಣಿಗೆ ಶರಣಾಗಿದ್ದಾನೆ.
ಚಂದ್ರಕಲಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ ಶಶಿಧರ್ ಹಲವು ದಿನಗಳಿಂದ ಬಿಂದಾಸ್ ಆಗಿ ಓಡಾಡಿಕೊಂಡಿದ್ದ.ಬ್ಯಾಡಗಿ ತಾಲೂಕಿನ ಯುವತಿ ಚಂದ್ರಕಲಾ ಹಾಗೂ ಶಶಿಧರ್ ಲವ್ ಬರ್ಡ್ಸ್ ಆಗಿ ಸುತ್ತಾಡಿಕೊಂಡಿದ್ದರು. ಆದರೆ ಇದ್ದಕ್ಕಿದ್ದಂತೆ ಏನಾಯಿತೋ ಗೊತ್ತಿಲ್ಲ. ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಬಳಿಕ ಲವ್ ಬ್ರೇಕಪ್ ಮಾಡಿಕೊಳ್ಳಲು ಚಂದ್ರಕಲಾ ಮುಂದಾಗಿದ್ದಾಳೆ . ಇದರಿಂದ ನೊಂದು ಶಶಿಧರ್ ನೇಣಿಗೆ ಶರಣಾಗಿದ್ದಾನೆ. ತಮ್ಮ ಪುತ್ರ ಆತ್ಮಹತ್ಯೆ ಮಾಡಿಕೊಳ್ಳಲು ಚಂದ್ರಕಲಾ ಕಾರಣ ಎಂದು ಶಶಿಧರ್ ಪೋಷಕರು ಆರೋಪಿಸಿದ್ದು, ಈ ಬಗ್ಗೆ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಮೃತ ಶಶಿಧರ್ ತಾಯಿ ಹುಲಿಗೆಮ್ಮ ದೂರು ದಾಖಲಿಸಿದ್ದಾರೆ.