ಬಳ್ಳಾರಿ: ಪ್ರೀತಿ, ಪ್ರೇಮ ಹೆಸರಿನಲ್ಲಿ ಲವ್ ಜಿಹಾದ್ ವ್ಯವಸ್ಥಿತವಾಗಿ ಜಾಲ ನೆಲೆಯೂರಿದೆ ಎಂದು ಶ್ರೀರಾಮಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜನಸಂಖ್ಯೆ ಹೆಚ್ಚು ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಪ್ರೀತಿ, ಪ್ರೇಮ ಹೆಸರಿನಲ್ಲಿ ಲವ್ ಜಿಹಾದ್ ವ್ಯವಸ್ಥಿತವಾಗಿ ಜಾಲ ನೆಲೆಯೂರಿದೆ.
2019 – 21 ರಲ್ಲಿ 13 ಲಕ್ಷ ಪ್ರಕರಣಗಳು ಮಹಿಳೆಯರಿಗೆ ಸಂಬಂಧಿಸಿದಂತೆ ದಾಖಲಾಗಿದ್ದು, ಇದರಲ್ಲಿ 2.51 ಲಕ್ಷ ಅಪ್ರಾಪ್ತರಿದ್ದಾರೆ. ಲವ್ ಜಿಹಾದ್ ಗೆ ಒಳಗಾದ ಶ್ರೀರಾಮ ಸೇನೆಯಿಂದ 4700 ಮಹಿಳೆಯರನ್ನು ವಾಪಸ್ ತರಲಾಗಿದೆ.
ದೇಶದ ಮುತಾಲಿಕ್ ಅವರಿಗೆ ಮದುವೆಯಾಗಿಲ್ಲ, ಅವರು ಏನೇನು ಹೇಳಿಕೊಂಡು ಹೋಗುತ್ತಿದ್ದಾರೆಂದು ಅನೇಕರು ಆರೋಪಿಸಿದ್ದಾರೆ. ಮೂರು ರಾಜ್ಯಗಳಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ಸಹ ರಚನೆಯಾಗಿದೆ. ಹೀಗಾಗಿ, ಮಹಿಳೆಯರಿಗೆ, ಕಾಲೇಜು ವಿದ್ಯಾರ್ಥಿನಿಯರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಎರಡನೇ ಆವೃತ್ತಿ ಮೂಲಕ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ ಎಂದರು.
ಲವ್ ಜಿಹಾದ್ ಇಂದು ಭಯಾನಕ ಪರಿಸ್ಥಿತಿಗೆ ಬಂದಿದೆ. ಇಡೀ ಜಗತ್ತನ್ನು ಇಸ್ಲಾಮಿಕ್ ಮಾಡುವ ಗುರಿ ಹೊಂದಿ, ಬೇರೆ ಬೇರೆ ರೂಪದಲ್ಲಿ ನಾನಾ ಪ್ರಯತ್ನ ನಡೆಸಲಾಗುತ್ತದೆ. ಅದರಲ್ಲಿ ಲವ್ ಜಿಹಾದ್ ಸಹ ಒಂದು ಎಂದು ಹೇಳಿದರು.