ಪ್ರೇಯಸಿಯೊಂದಿಗೆ ಲವ್ವಿ-ಡವ್ವಿ: ಹೆಂಡತಿಗೆ ಲಾಕ್ ಆಗಿದ್ದ ಹೆಡ್ ಕಾನ್ಸ್‌ಟೇಬಲ್ ಸಸ್ಪೆಂಡ್!

0
Spread the love

ದಾವಣಗೆರೆ:- ಪ್ರೇಯಸಿಯೊಂದಿಗೆ ಲವ್ವಿ-ಡವ್ವಿ ಆಡುತ್ತಿದ್ದಾಗ ಹೆಂಡತಿಗೆ ರೆಡ್ ಹ್ಯಾಂಡ್ ಆಗಿ ಲಾಕ್ ಆಗಿದ್ದ ಹೆಡ್ ಕಾನ್ಸ್‌ಟೇಬಲ್ ಸಸ್ಪೆಂಡ್ ಆಗಿದ್ದಾರೆ.

Advertisement

ಕಾನ್ಸ್‌ಟೇಬಲ್ ನ್ನು ಅಮಾನತ್ತು ಮಾಡಿ ಎಸ್ಪಿ ಉಮಾ ಪ್ರಶಾಂತ್ ಬಿಸಿ ಮುಟ್ಟಿಸಿದ್ದಾರೆ. ಹೌದು, ಹೊನ್ನಾಳಿ ಪೊಲೀಸ್ ಠಾಣೆಯ ಸಿಪಿಸಿ 124 ನಂಬರ್ ಪ್ರಸನ್ ಟಿ. ಅಮಾನತ್ತು ಆದ ಪೇದೆ.

ಪತ್ನಿಯಿಂದ‌ ದೂರು‌ ಪಡೆದ ನಂತರ ಹಿರಿಯ ಅಧಿಕಾರಿಗಳಿಂದ ‌ತನಿಖೆ ಮಾಡಿಸಿ ಆರೋಪ ಸತ್ಯವೆಂದು‌ ಗೊತ್ತಾದ ಬಳಿಕ ಅಮಾನತ್ತುಗೊಳಿಸಿದ್ದಾರೆ.

ಪರಸ್ತ್ರೀ ಸಂಘ ಮಾಡಿ ‌ಕೆಲ‌ ತಿಂಗಳಿಂದ ಮನೆಗೆ ಬರುವುದನ್ನೇ ಪೇದೆ ಪ್ರಸನ್ ನಿಲ್ಲಿಸಿದ್ದ. ಒಂದು ಗಂಡು, ಒಂದು‌ ಹೆಣ್ಣು ಮಕ್ಕಳ‌ನ್ನ ಕಟ್ಟಿಕೊಂಡು ಕುಟುಂಬ ನಡೆಸಲು ಪ್ರಸನ್ನ ಅವರ ಪತ್ನಿ ಪರದಾಡುತ್ತಿದ್ದರು.

ಈ ಮಧ್ಯೆ ಮತ್ತೊಬ್ಬಳೊಂದಿಗೆ ರಂಗಿನಾಟ ಪ್ರಶ್ನೆ ಮಾಡಿದಕ್ಕೆ ಪತ್ನಿಯ ತಲೆಗೆ ಕಬ್ಬಿಣದ ವಸ್ತುವಿನಿಂದ ಹೊಡೆದು ಹಲ್ಲೆ‌ಮಾಡಿದ್ದ. ಆತನ ದೌರ್ಜನ್ಯದಿಂದ ಬೇಸತ್ತು ಪತ್ನಿ ದೂರು ನೀಡಿದ್ದರು.

ಈ ಹಿನ್ನಲೆಯಲ್ಲಿ ಹಿರಿಯ ಅಧಿಕಾರಿಗಳಿಂದ ಎಸ್ಪಿ ತನಿಖೆ ಮಾಡಿಸಿದ್ದರು. ಆರೋಪ ಸತ್ಯವೆಂದು ಸಾಬೀತಾದ ಮೇಲೆ ಕ್ರಮ ಕೈಗೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here