ಬ್ಯಾನ್ ಶಿಕ್ಷೆಗೆ ಗುರಿಯಾದ ಲಖನೌ ಸ್ಪಿನ್ನರ್ ದಿಗ್ವೇಶ್ ರಾಠಿ! ಯಾಕೆ ಗೊತ್ತಾ..?

0
Spread the love

ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಎಲ್‌ಎಸ್‌ಜಿ ಸ್ಪಿನ್ನರ್ ದಿಗ್ವೇಶ್ ಸಿಂಗ್ ಅವರಿಗೆ ಒಂದು ಪಂದ್ಯದ ಅಮಾನತು ಮತ್ತು ಪಂದ್ಯ ಶುಲ್ಕದ 50% ದಂಡ ವಿಧಿಸಲಾಗಿದೆ. ಹೌದು  ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಜೊತೆ ಜಗಳಕ್ಕಿಳಿದಿದ್ದ ರಾಥಿಗೆ ಒಂದು ಪಂದ್ಯದ ನಿಷೇಧ ಹೇರಲಾಗಿದೆ.

Advertisement

ಈ ನಿಷೇಧದೊಂದಿಗೆ ದಿಗ್ವೇಶ್ ರಾಥಿಗೆ ಪಂದ್ಯ ಶುಲ್ಕದ ಶೇ 50 ರಷ್ಟು ದಂಡವನ್ನು ಸಹ ವಿಧಿಸಲಾಗಿದೆ. ಸದ್ಯ ಅವರ ಡಿಮೆರಿಟ್ ಪಾಯಿಂಟ್ 5 ಕ್ಕೇರಿದ್ದು, ಹೀಗಾಗಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಿಂದ ದಿಗ್ವೇಶ್​ನನ್ನು ಹೊರಗಿಡುವಂತೆ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸೂಚಿಸಲಾಗಿದೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ನಮನ್ ಧೀರ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಬಳಿಕ ದಿಗ್ವೇಶ್ ನೋಟ್​ಬುಕ್ ಸೆಲೆಬ್ರೇಷನ್ ಮಾಡಿದ್ದರು. ಈ ಆಕ್ರೋಶಭರಿತ ಸಂಭ್ರಮಕ್ಕೆ ರಾಥಿಗೆ ಪಂದ್ಯ ಶುಲ್ಕದ ಶೇ.50 ರಷ್ಟು ದಂಡ ವಿಧಿಸಿ, 2 ಡಿಮೆರಿಟ್ ಪಾಯಿಂಟ್ ನೀಡಲಾಗಿತ್ತು.

ಮೂರನೇ ಬಾರಿಗೆ ದಿಗ್ವೇಶ್ ರಾಥಿ ಐಪಿಎಲ್​ನ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ, ದಿಗ್ವೇಶ್ ರಾಥಿಗೆ ಒಂದು ಪಂದ್ಯದ ನಿಷೇಧ ಹೇರಿದ್ದಾರೆ. ಇದರ ಜೊತೆಗೆ ಪಂದ್ಯ ಶುಲ್ಕದ ಶೇ.50 ರಷ್ಟು ದಂಡ ವಿಧಿಸಿ, 2 ಡಿಮೆರಿಟ್ ಪಾಯಿಂಟ್ ನೀಡಿದ್ದಾರೆ. ಇನ್ನು ದಿಗ್ವೇಶ್ ರಾಥಿ ಜೊತೆ ಮೈದಾನದಲ್ಲೇ ಜಗಳಕ್ಕಿಳಿದಿದ್ದ ಸನ್​ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾಗೆ ಪಂದ್ಯ ಶುಲ್ಕದ ಶೇ.25 ರಷ್ಟು ದಂಡ ವಿಧಿಸಲಾಗಿದೆ.

 

 


Spread the love

LEAVE A REPLY

Please enter your comment!
Please enter your name here