Lucky Baskhar: ಲಕ್ಕಿ ಭಾಸ್ಕರ್‌ ಎಫೆಕ್ಟ್‌: ಸಿನಿಮಾ ಸ್ಟೈಲ್ʼನಲ್ಲಿ ಹಣ ಮಾಡಲು ಹೋಗಿ ಸಿಕ್ಕಿಬಿದ್ದ ಭೂಪ!

0
Spread the love

ಬೆಂಗಳೂರು: ಸಿನಿಮಾನ ನಿಮಾ ತರ ನೋಡಿ ಎಂಜಾಯ್‌ ಮಾಡೋದನ್ನು ಮೊದಲು ಪ್ರೇಕ್ಷಕರು ಕಲಿಯಬೇಕು. ಎಲ್ಲಾ ಅಂತಲ್ಲ, ಒಂದಿಷ್ಟು ಮಂದಿ ಸಿನಿಮಾ ನೋಡಿ ಅದರಿಂದ ಪ್ರೇರಿತರಾಗಿ ಸಿನಿಮಾದಲ್ಲಿ ಹೀರೋ ಮಾಡಿದ ಕೆಲಸವನ್ನು ಮಾಡೋದಕ್ಕೆ ಮುಂದಾಗ್ತಾರೆ. ಇಲ್ಲೋಬ್ಬ ವ್ಯಕ್ತಿ ಲಕ್ಕಿ ಭಾಸ್ಕರ್‌ ಸಿನಿಮಾ ನೋಡಿ ಹೀರೋ ಥರಾನೇ ದುಡ್ಡು ಮಾಡೋಕೆ ಹೋಗಿ ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Advertisement

ಶ್ರೀಕಾಂತ್​ ಎಂಬಾತನನ್ನು ಅಶೋಕನಗರ ಪೊಲೀಸರು ಸದ್ಯ ಬಂಧಿಸಿದ್ದಾರೆ. ವಿವಿಧ ಕಂಪನಿಗಳಿಗೆ ಅಕೌಂಟಿಂಗ್ ಸರ್ವಿಸ್ ನೀಡುತ್ತಿದ್ದ ಖಾಸಗಿ ಕಂಪನಿಯಲ್ಲಿ ಬಂಧಿತ ಆರೋಪಿ ಶ್ರೀಕಾಂತ್, ಅಸೋಸಿಯೇಟ್ ಅಕೌಂಟೆಂಟ್ ಆಗಿದ್ದರು.

ಸ್ವಿಗ್ಗಿ ಇಂಡಿಯಾದ ಎಲೆಕ್ಟ್ರಿಸಿಟಿ ಬಿಲ್​ ಪಾವತಿಗೆ ಶ್ರೀಕಾಂತ್​ನನ್ನು ನೇಮಿಸಲಾಗಿತ್ತು. ಆದರೆ ಕಳೆದ ವರ್ಷ ಜೂನ್​ನಿಂದ ಡಿಸೆಂಬರ್​ವರೆಗೂ ಕಂಪನಿ ಕ್ರೆಡಿಟ್ ಕಾರ್ಡ್ ಮೂಲಕ ಹಣ ಬಳಕೆ ಮಾಡಿದ್ದು, ಬರೋಬ್ಬರಿ 7 ಕೋಟಿ ರೂ. ಹಣವನ್ನ ಬಿಟಿಎನ್‌ ಎಕ್ಸ್‌ಚೆಂಜ್247.ಕಾಂ (BetinExchange247.com) ಬೆಟ್ಟಿಂಗ್ ಆ್ಯಪ್​ನಲ್ಲಿ ಹೂಡಿಕೆ ಮಾಡಿದ್ದಾರೆ.

ಇದೇ ಜನವರಿಯಲ್ಲಿ ನಡೆದ ಸ್ವಿಗ್ಗಿ ಆಡಿಟಿಂಗ್ ವೇಳೆ ಈ ವಿಚಾರ ಬಯಲಾಗಿದೆ. ವಿಚಾರ ತಿಳಿದು ಪ್ರಶ್ನಿಸಿದಾಗ ಬೆಟ್ಟಿಂಗ್​ನಲ್ಲಿ ಹೂಡಿಕೆ ಮಾಡಿದ್ದು ಬಯಲಾಗಿದೆ. ಬಳಿಕ ಕಂಪನಿಯಿಂದ ಅಶೋಕನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ದೂರು ಆಧರಿಸಿ ಅಶೋಕನಗರ ಪೊಲೀಸರು ಶ್ರೀಕಾಂತ್​ನನ್ನು ಬಂಧಿಸಿದ್ದಾರೆ. ಸಿನಿಮಾ ಸ್ಟೈಲ್​ನಲ್ಲಿ ಹಣ ಮಾಡಲು ಹೋಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.


Spread the love

LEAVE A REPLY

Please enter your comment!
Please enter your name here