ಚಂದ್ರಗ್ರಹಣ: ಭಾನುವಾರ ಘಾಟಿ ಸುಬ್ರಹ್ಮಣ್ಯ ದೇವಾಲಯ ಸಂಜೆ ವೇಳೆ ಬಂದ್!

0
Spread the love

ಚಿಕ್ಕಬಳ್ಳಾಪುರ:- ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯವನ್ನ ಭಾನುವಾರ ಸಂಜೆ 4:30 ಗಂಟೆಗೆ ಬಂದ್‌ ಮಾಡಲಾಗುತ್ತಿದೆ.

Advertisement

ಸೆಪ್ಟಂಬರ್ 7 ರಂದು ಭಾನುವಾರ ಮಧ್ಯರಾತ್ರಿ ಚಂದ್ರಗ್ರಹಣ ಗೋಚರಿಸಲಿರುವ ಹಿನ್ನೆಲೆ ಬಂದ್ ಮಾಡಲಾಗುತ್ತಿದೆ. ಗ್ರಹಣದ ಅಂಗವಾಗಿ ಪ್ರತಿ ದಿನವೂ 8:30ಕ್ಕೆ ಕ್ಲೋಸ್ ಮಾಡಲಾಗುತ್ತಿದ್ದ ದೇವಾಲಯದ ಬಾಗಿಲನ್ನ ಈ ವರ್ಷ ಸಂಜೆ 4:30ಕ್ಕೆ ಮುಚ್ಚಲಾಗುತ್ತದೆ. ಇನ್ನೂ ಗ್ರಹಣದ ನಂತರ ಎಂದಿನಂತೆ ಮರುದಿನ ಬೆಳಿಗ್ಗೆ ಶುದ್ದೀಕರಣ ಮಾಡಿ ಬಳಿಕ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಹೀಗಾಗಿ ಭಕ್ತಾದಿಗಳು ಸಹಕರಿಸುವಂತೆ ದೇವಾಲಯದ ಆಡಳಿತಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

ಸುದೀರ್ಘ ಅವಧಿಯ ಅಪರೂಪದ ಚಂದ್ರಗ್ರಹಣ ಭಾರತದಾದ್ಯಂತ ಗೋಚರಿಸಲಿದೆ. ಸೆ.7 ಮತ್ತು 8 ರಂದು ಚಂದ್ರಗ್ರಹಣ ಸಂಭವಿಸಲಿದೆ.


Spread the love

LEAVE A REPLY

Please enter your comment!
Please enter your name here