ವಿಜಯಸಾಕ್ಷಿ ಸುದ್ದಿ, ಗದಗ: ಅಂಜುಮನ್-ಎ-ಇಸ್ಲಾಂ ಕಮಿಟಿ ಗದಗ-ಬೆಟಗೇರಿ ಆಡಳಿತ ಮಂಡಳಿಯ ಸದಸ್ಯತ್ವ ಚುನಾವಣೆ ಸೆ.28ರಂದು ನಡೆಯಲಿದ್ದು, ಪಕ್ಷೇತರ ಅಭ್ಯರ್ಥಿಯಾದ ಎಂ.ಡಿ. ಯೂಸೂಫ್ ಡಂಬಳ ಪ್ರಚಾರ ಕಾರ್ಯ ಕೈಗೊಂಡರು.
Advertisement
ರಾಜೀವಗಾಂಧಿ ನಗರದ ಮಸೀದಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ಅಂಜುಮನ್-ಎ- ಇಸ್ಲಾಂ ಕಮಿಟಿ ಗದಗ-ಬೆಟಗೇರಿಯ ಅಭಿವೃದ್ಧಿಗಾಗಿ ನಾನು ಸಂಸ್ಥೆಯ ಸುಧಾರಣೆಗಾಗಿ ಈ ಬಾರಿ ಸ್ಪರ್ಧಿಸುತ್ತಿದ್ದು, ನನ್ನ ಚುನಾವಣೆಯ ಗುರುತು ಕ್ರಮ ಸಂಖ್ಯೆ :30, ಸಿಸಿಟಿವಿ ಕ್ಯಾಮರಾದ ಗುರುತಿಗೆ ತಮ್ಮ ಮತವನ್ನು ನೀಡಿ ನನ್ನನ್ನು ಆಯ್ಕೆ ಮಾಡಿ ತಮ್ಮ ಸೇವೆ ಮಾಡಲು ಅವಕಾಶ ನೀಡಬೇಕು ಎಂದು ವಿನಂತಿ ಮಾಡಿಕೊಂಡರು.