ಎಂ. ಆರ್. ಡೊಳ್ಳಿನರಿಗೆ `ಬೆಸ್ಟ್ ಪ್ರಿನ್ಸಿಪಾಲ್ ಅವಾರ್ಡ್’

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಕ್ಲಾಸಿಕ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ಪ್ರಾಚಾರ್ಯ ಎಂ.ಆರ್. ಡೊಳ್ಳಿನರಿಗೆ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಕರ್ನಾಟಕ ಶಿಕ್ಷಣ ರತ್ನ (ಬೆಸ್ಟ್ ಪ್ರಿನ್ಸಿಪಾಲ್ ಅವಾರ್ಡ್) ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

ಯ್ಯಾನಿಎಲ್ಪ್ ಗ್ರೂಪ್ಸ್ ಬೆಂಗಳೂರು ವತಿಯಿಂದ ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ, ಅಮೋಘ ಸಾಧನೆ ಮಾಡಿದ ಶಿಕ್ಷಕರನ್ನು, ಮುಖ್ಯೋಪಾಧ್ಯಾಯರನ್ನು, ಪ್ರಾಚಾರ್ಯರನ್ನು, ಸಂಸ್ಥಾಪಕರನ್ನು, ಶಾಲೆಗಳನ್ನು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಗುರುತಿಸಿ ಪ್ರತಿ ವರ್ಷ ಪ್ರಶಸ್ತಿ ನೀಡಿ ಗೌರವಿಸುತ್ತಾ ಬಂದಿದೆ. 2024-25ನೇ ಸಾಲಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ ಪ್ರಾಚಾರ್ಯರಿಗೆ ಕೊಡಮಾಡುವ ಕರ್ನಾಟಕ ಶಿಕ್ಷಣ ರತ್ನ (ಬೆಸ್ಟ್ ಪ್ರಿನ್ಸಿಪಾಲ್ ಅವಾರ್ಡ್) ಪ್ರಶಸ್ತಿಯು ನಗರದ ವಿದ್ಯಾದಾನ ಸಮಿತಿಯ ಕ್ಲಾಸಿಕ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಚಾರ್ಯ ಎಂ.ಆರ್. ಡೊಳ್ಳಿನ ಈ ಪ್ರಶಸ್ತಿಯನ್ನು ಪಡೆದಿದ್ದಾರೆ.

ಪ್ರಶಸ್ತಿ ವಿಜೇತ ಪ್ರಾಚಾರ್ಯ ಎಂ.ಆರ್. ಡೊಳ್ಳಿನರಿಗೆ ಸಂಸ್ಥೆಯ ಅಧ್ಯಕ್ಷ ಡಿ.ಬಿ. ಹುಯಿಲಗೋಳ, ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ, ಖಜಾಂಚಿ ಎನ್.ಬಿ. ಕಳಸಾಪುರ, ಆಡಳಿತ ಮಂಡಳಿಯ ನಿರ್ದೇಶಕ ಡಾ. ಪವನ ಎಸ್.ಹುಯಿಲಗೋಳ, ಶೈಕ್ಷಣಿಕ ಮಾರ್ಗದರ್ಶಕ ಪ್ರತೀಕ ಎಸ್.ಹುಯಿಲಗೋಳ, ಆಡಳಿತ ಅಧಿಕಾರಿಗಳಾದ ಡಾ. ಗಂಗೂಬಾಯಿ ಪವಾರ, ಶಕುಂತಲಾ ಪಾಟೀಲ್ ನಸಿಂಗ್ ಕಾಲೇಜಿನ ಆಡಳಿತ ಅಧಿಕಾರಿಗಳಾದ ಡಿ.ಬಿ. ಪಾಟೀಲ ಹಾಗೂ ಸ್ಪರ್ಶ ನರ್ಸಿಂಗ್ ಕಾಲೇಜಿನ ಆಡಳಿತ ಅಧಿಕಾರಿಗಳಾದ ರಂಗನಾಥ ಎಂ.ವಿ, ಸಿಇಓ ಪಿ.ಎಚ್. ಕಡಿವಾಲ, ಬಾಗಲಕೋಟೆಯ ಆರ್ಯಭಟ ಪ್ಯಾರಾ ಮೆಡಿಕಲ್ ಕಾಲೇಜಿನ ಚೇರಮನ್ ಪ್ರಶಾಂತ ಎಂ ಸೇರಿದಂತೆ ಶಾಲೆಯ ಸಮಸ್ತ ಶಿಕ್ಷಕರು, ಸಿಬ್ಬಂದಿ ವರ್ಗದವರು, ಪಾಲಕರು ಹಾಗೂ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಶಸ್ತಿ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀ ಮಾಲಯ ಶಾಂತಮುನಿ ಪೂಜ್ಯರು, ಚಲನಚಿತ್ರಗಳ ನಿರ್ದೇಶಕ ಹಾಗೂ ನಿರ್ಮಾಪಕ ಸುನಿಲ್ ಕುಮಾರ ದೇಸಾಯಿ, ಚಲನಚಿತ್ರ ಸಾಹಿತಿ ವಿ. ನಾಗೇಂದ್ರ ಪ್ರಸಾದ, ಹಾಸ್ಯ ಕಲಾವಿದರಾದ ಮಿಮಿಕ್ರಿ ಗೋಪಿ, ರಾಕೇಶ ಅಡಿಗ, ಯ್ಯಾನಿಎಲ್ಪ್ ಗ್ರೂಪ್ಸ್ ಕಂಪನಿಯ ಮುಖ್ಯಸ್ಥರು, ವಿದ್ಯಾದಾನ ಸಮಿತಿಯ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಮುಂತಾದ ಮಹನೀಯರ ಸಮ್ಮುಖದಲ್ಲಿ ಎಂ.ಆರ್. ಡೊಳ್ಳಿನರಿಗೆ ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.


Spread the love

LEAVE A REPLY

Please enter your comment!
Please enter your name here