ಬೆಳಗಾವಿ:- ಜಿಲ್ಲೆಯ ಗ್ರಾಮಗಳಲ್ಲಿ ಮನಬಂದಂತೆ ದಾಳಿ ನಡಿಸಿರುವ ಹುಚ್ಚು ನಾಯಿ, ಗುಂಡೇವಾಡಿ ಗ್ರಾಮದಲ್ಲಿ ಬೃಹತ್ ಪ್ರಮಾಣದಲ್ಲಿ ಜರುಗಿದ್ದ ಜಾತ್ರಾ ಮಹೋತ್ಸವದಲ್ಲಿ ನಾಯಿ ನುಗ್ಗಿ ಹನ್ನೆರಡು ಜನರಿಗೆ ಗಾಯಗೊಳಿಸಿದ್ದು, ಪಾರ್ಥನಹಳ್ಳಿ ಗ್ರಾಮದಲ್ಲಿ ಮೂರು ಚಿಕ್ಕಮಕ್ಕಳು ಮಹಿಳೆಯರು ಸೇರಿದಂತೆ ಆರು ಜನ ಹುಚ್ಚು ನಾಯಿ ಕಡಿತಕ್ಕೆ ಒಳಗಾಗಿದ್ದಾರೆ.
Advertisement
ಒಂಬತ್ತು ವರ್ಷದ ಬಾಲಕ ಮುಖಕ್ಕೆ ಮೈ ಭಾಗಗಳಿಗೆ ತೀವ್ರಗಾಯವಾಗಿ ಅಥಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು, ವಿಪರೀತ ಗಾಯಕ್ಕೆ ಒಳಗಾದ ಒಂಬತ್ತು ವರ್ಷದ ಬಾಲಕನ್ನು ಹೆಚ್ಚಿನ ಚಿಕಿತ್ಸೆಗೆ ಮಹಾರಾಷ್ಟ್ರದ ಸಾಂಗಲಿ ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇನ್ನುಳಿದವರನ್ನು ಅಥಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ “ಆಂಟಿರಾಬಿಜ್” ಚುಚ್ಚುಮದ್ದು ನೀಡಿಲಾಗಿ, ಒಟ್ಟು ಸಂಜೆ ವರೆಗೆ 18 ಕೇಸೆಸ್ ದಾಖಲಾದ ಬಗ್ಗೆ ತಾಲೂಕಾ ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.