ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಶಿಗ್ಲಿಯ ಹಳೇ ಬಸ್ ನಿಲ್ದಾಣದಲ್ಲಿ ಸೋಮವಾರ ಕೋಟೆ ನಾಡಿನ ಕಣ್ಮಣಿ ವೀರ ಮದಕರಿ ನಾಯಕರ ಜಯಂತಿಯನ್ನು ನಾಯಕ ಸಮಾಜದ ವತಿಯಿಂದ ಮದಕರಿ ನಾಯಕರ ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು.
Advertisement
ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ಸೋಮಣ್ಣ ಡಾಣಗಲ್ಲ ಮಾತನಾಡಿ, ಮದಕರಿ ನಾಯಕ ಧೀರ ಹೋರಾಟಗಾರರಾಗಿದ್ದರು. ಕನ್ನಡ ನಾಡನ್ನು ಉಳಿಸಿ ಬೆಳೆಸಲು ಅವರು ಮಾಡಿದ ಕಾರ್ಯಗಳು ನಮಗೆಲ್ಲ ಮಾರ್ಗದರ್ಶಿಯಾಗಿವೆ. ಅವರಂತೆ ನಮ್ಮ ಮಕ್ಕಳು ತಾಯಿ ನಾಡಿನ ಕುರಿತು ಹೆಮ್ಮೆ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿವಾನಂದ ತಳವಾರ, ರಾಮಣ್ಣ ತಳವಾರ, ಮಂಜು ಇಚ್ಚಂಗಿ, ಮಹಾದೇವ ಸಂಧಿಮನಿ, ರಾಜು ಓಲೇಕಾರ, ದೇವಪ್ಪ ವಾಲಿಕಾರ, ಮಾಯಪ್ಪ ವಾಲಿಕಾರ, ಮಹಾಂತೇಶ ತಳವಾರ, ಸುಹಾಸ್ ವಾಲಿಕಾರ, ಈರಣ್ಣ ಅಳ್ಳಳ್ಳಿ, ಸುರೇಶ ಇಟಿಗಿ, ರಾಜು ನದಾಫ್, ಉಳ್ಳಟ್ಟಿ ರಾಮಣ್ಣ ಮತ್ತಿತರರು ಇದ್ದರು.