ಚಾಮರಾಜನಗರ:- ಎಪ್ಪತ್ತೇಳು ಮಲೆಯ ಒಡೆಯ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಮತ್ತೆ ಕೋಟ್ಯಧೀಶನಾಗಿದ್ದಾನೆ. ಮಹದೇಶ್ವರನ ಹುಂಡಿಯಲ್ಲಿ ಕಳೆದ 27 ದಿನಗಳ ಅವಧಿಯಲ್ಲಿ 2.43 ಕೋಟಿ ರೂ. ಕಾಣಿಕೆ ಹಣ ಸಂಗ್ರಹವಾಗಿದೆ.
ಮಾದಪ್ಪನ ಸನ್ನಿಧಿಗೆ ಬರುವ ಲಕ್ಷಾಂತರ ಭಕ್ತರು, ಆತನ ಹುಂಡಿಗೆ ಉದಾರವಾಗಿ ಕಾಣಿಕೆ ಸಲ್ಲಿಸುತ್ತಿದ್ದಾರೆ. ಅದರಂತೆ ಹನೂರು ತಾಲೂಕಿನ ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಹುಂಡಿ ಎಣಿಕೆಯಲ್ಲಿ ಈ ಬಾರಿ 27 ದಿನಗಳಲ್ಲಿ ಬರೋಬ್ಬರಿ 2.43 ಕೋಟಿ ರೂ. ಸಂಗ್ರಹವಾಗಿದೆ.
63 ಗ್ರಾಂ ಚಿನ್ನಾಭರಣ ಕಾಣಿಕೆ ರೂಪದಲ್ಲಿ ಸಲ್ಲಿಕೆ ಮಾಡಲಾಗಿದೆ. ಹಾಗೇ ಅರ್ಧ ಕೆಜಿ ಬೆಳ್ಳಿ ಸಂಗ್ರಹವಾಗಿದೆ.
ಹುಂಡಿ ಎಣಿಕೆ ಪ್ರಕ್ರಿಯೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್ ಸರಗೂರು ಮಹದೇವಸ್ವಾಮಿ ಹಣಕಾಸು ಲೆಕ್ಕ ಪತ್ರ ಸಲಹೆಗಾರ ಜಿಲ್ಲಾಡಳಿತ ಕಛೇರಿ ಸಂಗೀತ ಹಾಗೂ ಪ್ರಾಧಿಕಾರದ ಸಿಬ್ಬಂದಿಗಳು ಪೊಲೀಸ್ ಅಧಿಕಾರಿಗಳು ಮತ್ತು ಕೊಳ್ಳೇಗಾಲ ಬ್ಯಾಂಕ್ ಅಪ್ ಬರೋಡ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳು ಹಾಜರಿದ್ದರು.