ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಕಳಸಾಪೂರ ಗ್ರಾಮದ ಬಸವಕೇಂದ್ರದ ವತಿಯಿಂದ ನಡೆದ ೧೫೩೯ನೇ ಶಿವಾನುಭವದಲ್ಲಿ ಮಹಾಮಹಿಮ ಮಾದರ ಚನ್ನಯ್ಯನವರ ಜಯಂತ್ಯುತ್ಸವನ್ನು ಆಚರಿಸಲಾಯಿತು. ಪ್ರಶಾಂತ ಬ.ಖಂಡಮ್ಮನವರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಬಸವಕೇಂದ್ರದ ಕಾರ್ಯಾಧ್ಯಕ್ಷ, ಕನ್ನಡಾಭಿಮಾನಿ ಮಲ್ಲಿಕಾರ್ಜುನ ಖಂಡಮ್ಮನವರ ಮಾತನಾಡಿ,
ಚೆನ್ನಯ್ಯ ಶರಣರು ಕಲ್ಯಾಣದ ನೆಲದಲ್ಲಿ ಸಂಚರಿಸಿ ಶರಣರ ಲಿಂಗಯೋಗದ ಪಥವನ್ನು ಅರಿತು ಆಚರಿಸುವುದಕ್ಕೆ ಬಸವಕಲ್ಯಾಣಕ್ಕೆ ಸಮೀಪದಲ್ಲಿರುವ ಅಮೃತ ಕುಂಡ ಸಾಕ್ಷಿಯಾಗಿದೆ ಎಂದರು.
ಮಾದಾರ ಸಮಾಜದ ಹಿರಿಯರಾದ ಶೇಖಮ್ಮ ಕೆಂಚಪ್ಪ ಮಾದರ ಇವರನ್ನು ಸಿ.ಬಿ. ಪಲ್ಲೇದ, ಬಸವರಾಜ ಕಣವಿ, ಮಂಜು ರಾಮನಗೌಡರ, ಮಲ್ಲಪ್ಪ ಅಂಗಡಿ, ಶೋಭಾ ಪಿ.ಹಗೇದಾಳ, ಶೈಲಾ ಎಸ್.ಹಗೇದಾಳ, ಜಯಶ್ರೀ ಸೋಂಪೂರ, ಮಧು ಮಾದರ, ಶೃತಿ ಮಾದರ, ರಾಧಿಕಾ ದೊಡ್ಡಮನಿ, ಮೇಘಾ ಮಾದರ, ನಿರ್ಮಲ ಮಾದರ, ಮನಿಷಾ ಮಾದರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಗ್ರಾಮದ ಹಿರಿಯರಾದ ಸಿ.ಬಿ. ಪಲ್ಲೇದ ಸಮಾರೋಪ ನುಡಿಗಳನ್ನಾಡಿದರು. ವಚನ ಮಂಗಲಗೀತೆಯೊಂದಿಗೆ ಈ ಕಾರ್ಯಕ್ರಮ ಮುಕ್ತಾಯಗೊಂಡಿತು ಎಂದು ಮಂಜು ರಾಮನಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.