ನಟ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿ ನಟ ಮಡೆನೂರು ಮನು ಕ್ಷಮೆಯಾಚಿಸಿದ್ದಾರೆ. ಹೌದು ಮಡೆನೂರು ಮನು ಜೈಲಿಂದ ಬಿಡುಗಡೆಯಾದಾಗಿನಿಂದ ಶಿವಣ್ಣ ಬಳಿ ಕ್ಷಮೆ ಕೇಳಬೇಕೆಂದು ಪ್ರಯತ್ನಿಸುತ್ತಲೇ ಇದ್ದರು. ಇದೀಗ ಡ್ಯಾಡಿ ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ಶಿವಣ್ಣ ಕಾಲಿಗೆ ಬಿದ್ದ ಮನು ಕ್ಷಮೆ ಕೇಳಿದ್ದಾರೆ.
ನಾನು ಆಡಿದ ಮಾತು ತಪ್ಪು ಎಂದು ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ. ಈ ವೇಳೆ ಶಿವಣ್ಣ, ‘ನನ್ನ ಬಗ್ಗೆ ಯಾರು ಬೈದ್ರು ನಾನು ತಲೆಕೆಡಿಸಿ ಕೊಳ್ಳಲ್ಲ ಎಂದು ನಗುತ್ತಲ್ಲೆ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಡೆನೂರು ಮನು, ‘ನನ್ನ ಕ್ಷಮಿಸಿ, ಮತ್ತೆ ಕುಲದಲ್ಲಿ ಕೀಳ್ಯಾವುದೋ ಸಿನಿಮಾ ರೀ ರಿಲೀಸ್ ಮಾಡ್ತಿವಿ, ನೀವು ನಮ್ಮ ಸಿನಿಮಾಗೆ ಸಪೋರ್ಟ್ ಮಾಡಿ ಎಂದು ಹೇಳಿದ್ದಾರೆ.
ಒಳ್ಳೆ ಟೈಟಲ್ ಸಿನಿಮಾ ಮತ್ತೆ ರೀ ರಿಲೀಸ್ ಮಾಡಿ ಒಳ್ಳೆದಾಗಲಿ ಎಂದು ವಿಶ್ ಮಾಡಿದ ಶಿವಣ್ಣ ಆಶೀರ್ವಾದಿಸಿದ್ದಾರೆ. ಮಡೆನೂರು ಮನು ಜೈಲಿಂದ ಬಿಡುಗಡೆಯಾದಾಗಿನಿಂದ ಶಿವಣ್ಣ ಬಳಿ ಕ್ಷಮೆ ಕೇಳಬೇಕೆಂದು ಪ್ರಯತ್ನಿಸುತ್ತಲೇ ಇದ್ದಾರೆ. ಕೆಲ ತಿಂಗಳ ಹಿಂದಷ್ಟೇ ಮಡೆನೂರು ಮನು ಮತ್ತು ಪತ್ನಿ, ಮಗು ಜೊತೆ ಶಿವರಾಜ್ ಕುಮಾರ್ ಅವರ ಮನೆ ಗೇಟ್ ಮುಂದೆ ನಿಂತಿರುವ ವಿಡಿಯೋಗಳು ವೈರಲ್ ಆಗಿತ್ತು.