ಮಧ್ಯಪ್ರದೇಶ| ದುರಸ್ತಿ ವೇಳೆ ಕುಸಿದು ಬಿದ್ದ ಸೇತುವೆ: ಓರ್ವ ವ್ಯಕ್ತಿ ಸಾವು, ಹಲವರು ಗಾಯ

0
Spread the love

ರಾಯಸೇನ್:- ದುರಸ್ತಿ ಕಾರ್ಯದ ವೇಳೆ ಸೇತುವೆ ಕುಸಿದು ಬಿದ್ದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ರಾಯಸೇನ್ ಜಿಲ್ಲೆಯ ಬರೇಲಿ-ಪಿಪರಿಯಾ ರಾಜ್ಯ ಹೆದ್ದಾರಿಯಲ್ಲಿ ಜರುಗಿದೆ.

Advertisement

ಘಟನೆಯಲ್ಲಿ ಓರ್ವ ಸಾವನ್ನಪ್ಪಿದರೆ, ಹಲವರು ಗಾಯಗೊಂಡಿದ್ದಾರೆ. ನಯಾಗಾಂವ್ ಸೇತುವೆಯ ಬರೇಲಿ ಬದಿಯಲ್ಲಿ ನಿರ್ವಹಣಾ ಕಾರ್ಯ ನಡೆಯುತ್ತಿರುವಾಗ ಒಂದು ಸ್ಪ್ಯಾನ್ ಕುಸಿದಿದೆ. ಎರಡು ಬೈಕ್​​ನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಯುವಕರಿಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರನ್ನು ಮಾಜಿ ಸಿಆರ್‌ಪಿಎಫ್ ಜವಾನ ದೇವೇಂದ್ರ ಧಕಾಡ್ ಎಂದು ಗುರುತಿಸಲಾಗಿದ್ದು, ಚಿಕಿತ್ಸೆ ಸಮಯದಲ್ಲಿ ಸಾವನ್ನಪ್ಪಿದ್ದಾರೆ. ಉಳಿದ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ.


Spread the love

LEAVE A REPLY

Please enter your comment!
Please enter your name here