HomeGadag Newsಶತಕ ವೀರರ ಮಹಾ ಸಾಧನಾ ಸಮಾವೇಶ

ಶತಕ ವೀರರ ಮಹಾ ಸಾಧನಾ ಸಮಾವೇಶ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿಯ ಸಮೀಪದ ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರದ ಸಭಾ ಭವನದಲ್ಲಿ ನಡೆದ ಭಾರತೀಯ ಜೀವ ವಿಮಾನ ನಿಗಮ ಗದಗ-1ನೇ ಶಾಖೆಯ ಚಂದ್ರೋದಯ ಘಟಕದ ಸಾಧನಾ ಸಮಾವೇಶವನ್ನು ಧಾರವಾಡ ವಿಭಾಗದ ಎಸ್‌ಡಿಎಂ ಬಿ.ಎಸ್. ಚಕ್ರವರ್ತಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಚಂದ್ರೋದಯ ಘಟಕ ಗದಗ ಶಾಖೆಯಲ್ಲಿ ಉನ್ನತ ಮಟ್ಟದ ಸ್ಥಾನ ಪಡೆದು, ಈಗ ಧಾರವಾಡ ವಿಭಾಗ ಮಟ್ಟದಲ್ಲಿ 1ನೇ ಸ್ಥಾನ ಪಡೆದಿದ್ದು, ಈ ಆರ್ಥಿಕ ವರ್ಷದಲ್ಲಿ ವಲಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯಲಿ ಎಂದು ಆಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಭಿವೃದ್ಧಿ ಅಧಿಕಾರಿ ಸಿ. ಚಂದ್ರಕಾAತ ಹಾಗೂ ಶಾಖೆಯ ಮ್ಯಾನೇಜರ್ ಎಚ್.ಎಂ. ಭಜಂತ್ರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಂಎಂ ರತ್ನಪ್ರಭಾ ಅವರು ಶತಕ ವೀರರ ಫೋಟೋ ಇರುವ ಲೋಗೋವನ್ನು ಬಿಡುಗಡೆ ಮಾಡಿದರು. ವಿಭಾಗದ ಮ್ಯಾನೇಜರ್ ವಿಕ್ರಿಯ ಪ್ರಶಾಂತ ಎನ್.ಜಿ. 25 ಶತಕ ವೀರ ಪ್ರತಿನಿಧಿಗಳನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಚಂದ್ರಕಾಂತ್ ದಂಪತಿಗಳು, ಬಿ.ಆರ್. ಕುಲಕರ್ಣಿ, ರಾಜೇಶ್ವರಿ ಕಲಾಲ, ಶಿವಾನಂದ ಬಳೆಗಾರ, ಶೈಲಜಾ ಶೇರವಾಡ, ಮಲ್ಲೇಶ್ ಬಸರಿಮರ, ಸಿದ್ಲಿಂಗನಗೌಡ ಹರ್ತಿ, ಮಾದೇವಿ ಅಂಗಡಿ, ಭರಮಪ್ಪ ಸಾಲಿ, ಉಮೇಶ್ ನವಲಗುಂದ, ವೀರಯ್ಯ ಹಿರೇಮಠ, ಈಶಪ್ಪ ನಾಲ್ಕುರವಿ, ರಾಘವೇಂದ್ರ ಅರರೆ, ಜಗದೀಶ್ ಕೊಲ್ಲಾರಿ, ಗಂಗಾಧರ ಬೆನಕಲ್, ಯಲ್ಲಪ್ಪ ಬಾಬರಿ, ಬಸವರಾಜ್ ಭಜಂತ್ರಿ, ಚೆನ್ನಪ್ಪ ಕುಟುಗನಹಳ್ಳಿ, ಜಗದೀಶ್ ಗೌಡರ, ಜ್ಯೋತಿ ಹಿರೇಮಠ, ಪ್ರಶಾಂತ ಹಟ್ಟಿ, ಜ್ಯೋತಿ ಹಾನಗಲ್, ವಾಣಿಶ್ರೀ ಉಪನಾಳ, ಮಂಜುಳಾ ಇಟಗಿ, ವೀರಣ್ಣ ಕುಬುಸದ, ಪುಷ್ಪವತಿ ಉಕ್ಕಲಿ ಹಾಗೂ ವಿಮಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!