ಮಹದಾಯಿ ವಿವಾದ: ಗೋವಾ ಸಿಎಂ ಹೇಳಿಕೆ ವಿರುದ್ಧ ಸಚಿವ ಈಶ್ವರ್ ಖಂಡ್ರೆ ಆಕ್ರೋಶ

0
Spread the love

ಬೆಂಗಳೂರು: ಮಹದಾಯಿ ನದಿ ಜಲ ಹಂಚಿಕೆ ಸಂಬಂಧ ಗೋವಾ ಮುಖ್ಯಮಂತ್ರಿ ನೀಡಿರುವ ಹೇಳಿಕೆ ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅವರು, ಗೋವಾ ಸಿಎಂ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,

Advertisement

ಗೋವಾ ಮುಖ್ಯಮಂತ್ರಿ ನೀಡಿರುವ ಹೇಳಿಕೆ ರಾಜ್ಯದ ರೈತರಿಗೆ ಹಾಗೂ ಜನತೆಗೆ ವಿರುದ್ಧವಾಗಿದೆ. ಕರ್ನಾಟಕ ಸರ್ಕಾರ ಮಹದಾಯಿ ಯೋಜನೆಗೆ ಅನುಮತಿ ನೀಡುವಂತೆ ಪರಿಸರ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಅದಕ್ಕೆ ಗೋವಾ ಸಿಎಂ ಅನುಮತಿ ಕೊಡಲ್ಲ ಅಂದಿದ್ದಾರೆ.

ಪ್ರತಿಯೊಂದು ವಿಷಯದಲ್ಲೂ ಕರ್ನಾಟಕದ ಮೇಲಿಂದ ಮೇಲೆ ಅನ್ಯಾಯವೇ ನಡೆಯುತ್ತಿದೆ. ಇದು ಮುಂದುವರಿದರೆ ರಾಷ್ಟ್ರದ ಫೆಡರಲ್ ವ್ಯವಸ್ಥೆಯ ತತ್ವಕ್ಕೂ ಧಕ್ಕೆ ಆಗಲಿದೆ, ಎಂದು ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದರು. ಅಗತ್ಯ ಬಿದ್ದರೆ ಸುಪ್ರೀಂಕೋರ್ಟ್‌’ಗೆ ಹೋಗಲು ನಾವು ಸಿದ್ಧ ಎಂದು ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here