ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲೆಯಲ್ಲಿ ಬಹುತೇಕ ವಾಲ್ಮೀಕಿ ಸಮುದಾಯದ ಜನರು ಸಾಕಷ್ಟು ಪ್ರಮಾಣದಲ್ಲಿದ್ದಾರೆ. ನಗರದಾದ್ಯಂತ ಹಲವು ಮಹನೀಯರ ವೃತ್ತಗಳನ್ನು ನಿರ್ಮಿಸಲಾಗಿದೆ. ಆದರೆ, ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತ ನಿರ್ಮಾಣ ಆಗದಿರುವುದು ಬೇಸರದ ಸಂಗತಿಯಾಗಿದೆ. 2025ರ ವಾಲ್ಮೀಕಿ ಜಯಂತಿಯ ಒಳಗಾಗಿ ವಾಲ್ಮೀಕಿ ಸರ್ಕಲ್ ನಿರ್ಮಾಣವಾಗದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾ ಸಭಾ ಯುವ ಘಟಕದ ರಾಜ್ಯಾಧ್ಯಕ್ಷ ಡಾ. ತುಳಸಿರಾಮ ಎಚ್ಚರಿಕೆ ನೀಡಿದರು.
ಅವರು ಭಾನುವಾರ ಗದಗ ಜಿಲ್ಲಾ ವಾಲ್ಮೀಕಿ ನಾಯಕ ಸೇವಾ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಆದಿಕವಿ ಶ್ರೀ ಮಹರ್ಷಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದ ಗದಗ ಜಿಲ್ಲಾಧ್ಯಕ್ಷ ಅನಿಲಕುಮಾರ ಸಿದ್ದಮ್ಮನಹಳ್ಳಿ ಮಾತನಾಡಿದರು. ರಾಜೇಶ್ವರಿ ಕಲಾ ಕುಟೀರ ತಂಡದ ಮೇಘನಾ ವಾಲ್ಮೀಕಿ ಅವರಿಂದ ಭರತನಾಟ್ಯ ಪ್ರದರ್ಶನದ ಮೂಲಕ ಸರ್ವರನ್ನು ಸ್ವಾಗತಿಸಲಾಯಿತು. ವಾಲ್ಮೀಕಿ ಸರ್ಕಲ್‌ನಿಂದ ಬನ್ನಿಕಟ್ಟ ಪಂಚರಹೊಂಡ, ಬಸವೇಶ್ವರ ಸರ್ಕಲ್, ಟಾಂಗಾಕೂಟ ಮಹೇಂದ್ರಕರ್ ಸರ್ಕಲ್ ಹಾಗೂ ಡಿಸಿ ಮಿಲ್ ಮಾರ್ಗವಾಗಿ ಗಂಗಾಪುರ ಪೇಟೆಯಲ್ಲಿರುವ ಶ್ರೀ ದುರ್ಗಾದೇವಿ ದೇವಸ್ಥಾನ ಆವರಣದವರೆಗೆ ಭಾವಚಿತ್ರ ಮೆರವಣಿಗೆ ನಡೆಯಿತು.
ಶಿಕ್ಷಕ ಬಾಹುಬಲಿ ಜೈನರ್ ಕಾರ್ಯಕ್ರಮವು ನಿರುಪಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಸಮಾಜ ಕಲ್ಯಾಣ ಇಲಾಖೆಯ ಮಹೇಶ ಪೋತದಾರ, ಪರಿಶಿಷ್ಠ ಪಂಗಡ ನೌಕರ ಸಂಘದ ದೆವೇಂದ್ರಪ್ಪ ತಳವಾರ, ಪಿ.ಎಸ್.ಐ. ಶಕುಂತಲಾ ನಾಯಕ, ಪರಿಶಿಷ್ಟ ಪಂಗಡ ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ವೀರೇಶ ವಾಲ್ಮೀಕಿ, ನಗರ ಸಭಾ ಸದಸ್ಯರಾದ ನಾಗರಾಜ ತಳವಾರ, ನಗರಸಭಾ ಸದಸ್ಯೆ ಲಕ್ಷ್ಮೀ ಅನಿಲಕುಮಾರ ಸಿದ್ದಮ್ಮನಹಳ್ಳಿ, ಕೆ.ಡಿ.ಪಿ. ಸದಸ್ಯರಾದ ಎಸ್.ಎನ್. ಬಳ್ಳಾರಿ, ವಸಂತಕುಮಾರ ಸಿದ್ದಮ್ಮನಹಳ್ಳಿ, ಗೊವೀಂದರಾಜ ಪನ್ನೂರ, ಅರುಣ ಬೆಳಧಡಿ, ಶಿವಾನಂದ ತಳವಾರ, ವಸಂತ ವಾಲ್ಮೀಕಿ, ಅನಿಲ ಪೂಜಾರ, ಶ್ರೀಕಾಂತ ಪೂಜಾರ, ವಿಜಯ ಕುರಗೋಡ, ದತ್ತು ಬೆಳಧಡಿ, ಕಿರಣ ನಾಯ್ಕರ, ಮಾರುತಿ ಕಾತರಕಿ, ಈಶ್ವರ ರೌಡೂರು, ರಮೇಶ ಹೊಟ್ಟಿ ಮುಂತಾದವರಿದ್ದರು.