ಮಹರ್ಷಿ ವಾಲ್ಮೀಕಿ ಮನುಕುಲದ ದಾರ್ಶನಿಕ : ರಾಜು ಸಾಂಗ್ಲೀಕರ

0
Maharshi Valmiki Jayanti programme
Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಕಲ್ಪನೆಗೆ ನಿಲುಕದ ರಾಮಾಯಣ ಕೃತಿಯನ್ನು ರಚಿಸಿದ ಮಹರ್ಷಿ ವಾಲ್ಮೀಕಿ ಅವರು ಮನುಕುಲದ ದಾರ್ಶನಿಕರಾಗಿದ್ದು, ಅವರ ಆದರ್ಶಗಳನ್ನು ಯುವ ಸಮೂಹ ಅಳವಡಿಸಿಕೊಳ್ಳಬೇಕು ಎಂದು ಪುರಸಭೆ ಸದಸ್ಯ ರಾಜು ಸಾಂಗ್ಲೀಕರ ಹೇಳಿದರು.

Advertisement

ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಗುರುವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.

ಸರ್ಕಾರಗಳು ಆಚರಣೆಗೆ ತಂದಿರುವ ಜಯಂತಿಗಳು ಕೇವಲ ಆಚರಣೆಗೆ ಸಿಮಿತವಾಗಬಾರದು. ಜಯಂತಿ ಆಚರಣೆಯ ಹಿಂದಿರುವ ಮಹತ್ವ ತಿಳಿದು ಜಯಂತಿ ಆಚರಣೆಗೆ ನಾವೆಲ್ಲರೂ ಮುಂದಾಗಬೇಕಿದೆ. ಅದರಲ್ಲೂ ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಕಾವ್ಯ ಕಲ್ಪನೆಗೂ ನಿಲುಕದ್ದು, ದೇಶಕ್ಕಷ್ಟೇ ಅಲ್ಲದೆ ವಿಶ್ವಕ್ಕೇ ಮಾದರಿಯಾಗುವಂತಹ ಕಾವ್ಯವಾಗಿದೆ. ವಾಲ್ಮೀಕಿ ಅವರ ವಿಚಾರಧಾರೆಗಳು ಇಂದಿನ ಯುವ ಪಿಳೀಗಿಗೆ ಆದರ್ಶವಾಗಬೇಕು ಎಂದರು.

ಪುರಸಭೆ ಸ್ಥಾಯಿ ಸಮಿತಿ ಚೇರಮನ್ ಮುದಿಯಪ್ಪ ಮುಧೋಳ ಮಾತನಾಡಿ, ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಕಾವ್ಯ ಸರ್ವಶ್ರೇಷ್ಠವಾದದ್ದು. ಪೋಷಕರು ಮಕ್ಕಳಿಗೆ ಇತಿಹಾಸ ಹಾಗೂ ಪರಂಪರೆಯನ್ನು ತಿಳಿಸುವುದರ ಜೊತೆಗೆ ಮಾನವಕುಲದ ಒಳಿತಿಗಾಗಿ ನೀಡಿದ ವಿಚಾರಗಳನ್ನು ಅಳವಡಿಸಿಕೊಳ್ಳಲು ನೀತಿಪಾಠದ ಅವಶ್ಯಕತೆಯಿದೆ. ಹೀಗಾಗಿ ಪಾಲಕರು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಉತ್ತಮ ವ್ಯಕ್ತಿಗಳನ್ನಾಗಿ ನಿರ್ಮಿಸಿ ದೇಶಕ್ಕೆ ಕೊಡುಗೆ ನೀಡಬೇಕಿದೆ ಎಂದರು.

ಪುರಸಭೆ ಸದಸ್ಯ ಶರಣಪ್ಪ ಉಪ್ಪಿನಬೆಟಗೇರಿ ಹಾಗೂ ಉಪನ್ಯಾಸಕ ಪ್ರಕಾಶ ತಳವಾರ ಮಾತನಾಡಿದರು. ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಗಜೇಂದ್ರಗಡ ಮಹರ್ಷೀ ವಾಲ್ಮೀಕಿ ಸಮಾಜದ ಅಧ್ಯಕ್ಷ ಯಮನೂರಪ್ಪ ತಳವಾರ, ಪುರಸಭೆ ಸದಸ್ಯ ಮೂಕಪ್ಪ ನಿಡಗುಂದಿ, ಮುಖಂಡರಾದ ಹುಚ್ಚಪ್ಪ ತಳವಾರ, ದುರಗಪ್ಪ ಮುಧೋಳ, ಭೀಮಣ್ಣ ತಳವಾರ, ಸಿದ್ದಪ್ಪ ಚೋಳೀನ, ಶ್ರೀಕಾಂತ ಹರಪನಹಳ್ಳಿ, ಲಕ್ಷö್ಮಣ ತಳವಾರ, ಫಕೀರಪ್ಪ ತಳವಾರ, ಎಂ.ಎಚ್.ರAಗಣ್ಣವರ, ಹಾಗೂ ಮಲ್ಲಿಕಾರ್ಜುನಗೌಡ ಬಿ, ರಿಯಾಜ ಒಂಟಿ ಮುಂತಾದವರಿದ್ದರು.

 


Spread the love

LEAVE A REPLY

Please enter your comment!
Please enter your name here