HomeGadag Newsಮಳೆ ಹಾನಿ ನಿವಾಸಗಳಿಗೆ ಮಹೇಶ ಪೋತದಾರ ಭೇಟಿ

ಮಳೆ ಹಾನಿ ನಿವಾಸಗಳಿಗೆ ಮಹೇಶ ಪೋತದಾರ ಭೇಟಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ನಗರದಲ್ಲಿ ರವಿವಾರ ಸುರಿದ ಮಳೆಯಿಂದಾಗಿ ವಾರ್ಡ್ ನಂ.4ರಲ್ಲಿ ವಾಸಿಸುತ್ತಿರುವ ಮನೆಗಳಿಗೆ ನೀರು ನುಗ್ಗಿ ತೊಂದರೆಯಾದ ಸ್ಥಳಕ್ಕೆ ನಗರಸಭೆ ಪೌರಾಯುಕ್ತ ಮಹೇಶ ಪೋತದಾರ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು.

ಚರಂಡಿ ನೀರು ಸರಾಗವಾಗಿ ಹರಿದು ಹೋಗುವಂತೆ ನಗರ ಸಭೆಯ ಜೆಸಿಬಿ ಮೂಲಕ ಕಾರ್ಯನಿರ್ವಹಿಸಿ ಕ್ರಮ ಕೈಗೊಂಡರು. ಮಳೆ ಬಂದಾಗ ತೊಂದರೆಯಾಗುವ ಮನೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಕುರಿತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಅಕ್ಕಿ, ಸಹಾಯಕ ಆಯುಕ್ತ ಗಂಗಪ್ಪ, ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬಂಡಿವಡ್ಡರ್, ಲೋಕೋಪಯೋಗಿ ಇಲಾಖೆಯ ಪಾಟೀಲ್, ಪರಿಸರ ಅಭಿಯಂತರ ಆನಂದ ಬದಿ, ಆರೋಗ್ಯ ನಿರೀಕ್ಷಕ ಮಕಾನದಾರ್, ಆರ್‌ಓ ನದಾಫ್, ಸಪಾಯಿ ಕರ್ಮಚಾರಿ ನಾಮನಿರ್ದೇಶಕ ಸದಸ್ಯ ರಮೇಶ್ ಕೋಳೂರು, ನಗರಸಭೆ, ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿ-ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!