ಆಡಳಿತ ವಿಭಾಗಕ್ಕೆ ಮೇಜರ್​ ಸರ್ಜರಿ: 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ!

0
Spread the love

ಬೆಂಗಳೂರು:- ಏಳು ಐಪಿಎಸ್​ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Advertisement

ಐಪಿಎಸ್​ ಏಳು ಮಂದಿ ಅಧಿಕಾರಿಗಳನ್ನು ದಿಢೀರ್​ ವರ್ಗಾವಣೆ ಮಾಡುವ ಮೂಲಕ ಕರ್ನಾಟಕ ಸರ್ಕಾರ ಆಡಳಿತ ವಿಭಾಗಕ್ಕೆ ಮೇಜರ್​ ಸರ್ಜರಿ ಮಾಡಿದೆ.

ಹುದ್ದೆ ನಿರೀಕ್ಷೆಯಲ್ಲಿದ್ದ ಸಂತನು ಸಿನ್ಹಾ ಅವರನ್ನು ಸಿಐದಿಯ ಡಿಐಜಿ ಹುದ್ದೆಗೆ ಹಾಗೂ ಸಿಐಡಿಯ ಎಸ್​​ಪಿ ಹುದ್ದೆಗೆ ಜಿ.ಸಂಗೀತ ಅವರನ್ನು ವರ್ಗಾವಣೆ ಮಾಡಲಾಗಿದೆ.

ಬಿಎಂಟಿಸಿಯ ನಿರ್ದೇಶಕರಾಗಿ ಅಬ್ದುಲ್ ಅಹದ್, ವಿಜಯಪುರ ಜಿಲ್ಲಾ ಎಸ್ಪಿಯಾಗಿ ಲಕ್ಷ್ಮಣ್ ನಿಂಬರಗಿ, ಯಾದಗಿರಿ ಜಿಲ್ಲಾ ಎಸ್ಪಿಯಾಗಿ ಪೃಥ್ವಿಕ್ ಶಂಕರ್ ಅವರನ್ನು ವರ್ಗಾಯಿಸಲಾಗಿದೆ.

ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್ ಅಕಾಡೆಮಿಯ ಉಪನಿರ್ದೇಶಕ ಚನ್ನಬಸವಣ್ಣ ಲಂಗೋಟಿ ಅವರಿಗೆ ರಾಜ್ಯ ಪೊಲೀಸ್ ಅಕಾಡೆಮಿಯ ನಿರ್ದೇಶಕರ ಹುದ್ದೆಯ ಹೊಣೆಗಾರಿಕೆಯನ್ನು ವಹಿಸಲಾಗಿದೆ.

ಡಾ.ಎಂ.ಬಿ.ಬೋರಲಿಂಗಯ್ಯ ಅವರನ್ನು ಇರ್ದೇಶಕರ ಹುದ್ದೆಯ ಜವಾಬ್ದಾರಿಯಿಂದ ಬಿಡುಗಡೆಗೊಳಿಸಲಾಗಿದೆ. ರಾಜ್ಯ ಅಪರಾಧ ದಾಖಲೆಗಳ ಬ್ಯೂರೊ ಎಸ್ಪಿಯಾಗಿ ಶಿವಾಂಶು ರಜಪೂತ್ ಅವರನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ.


Spread the love

LEAVE A REPLY

Please enter your comment!
Please enter your name here