ವಿಜಯಸಾಕ್ಷಿ ಸುದ್ದಿ, ಗದಗ: ಕವಿ, ಲೇಖಕ, ನ್ಯಾಯಾಂಗ ಇಲಾಖೆಯ ನಿವೃತ್ತ ನೌಕರ, ಪ್ರಕಾಶಕ ಎ.ಎಸ್. ಮಕಾನದಾರ ಅವರ ಕವಿತೆ ರಾಜ್ಯ ಶಿಕ್ಷಣ ನೀತಿಯಡಿ ಸಿದ್ಧಪಡಿಸಿದ ಕನ್ನಡ ವಿಭಾಗದ ಕಲಾ ಪದವಿಯ ಭಾಷಾ ಪಠ್ಯ, ಐಚಿಕ ಪಠ್ಯ ಮತ್ತು ಮುಕ್ತ ಆಯ್ಕೆ ಕನ್ನಡ ಪಠ್ಯಗಳಲ್ಲಿ ಸೇರ್ಪಡೆಯಾಗಿದೆ.
ಬಳ್ಳಾರಿ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾನಿಲಯದ ಬಿಎಸ್‌ಸಿ / ಬಿಎಸ್‌ಸಿ (ಜಿಎಂಟಿ) ಬಿಸಿಎ 4ನೇ ಸೆಮಿಸ್ಟರ್ ಭಾಷಾ ಕನ್ನಡ ಪಠ್ಯ, ವಿಜ್ಞಾನ ಸೌರಭ–3ರಲ್ಲಿ ಕವಿ ಮಕಾನದಾರ ಅವರ ದರ್ವೇಶಿ ಪದ್ಯ’ ಕವನ ಸಂಕಲನದ ಲಾಂದ್ರದ ಬೆಳಕಲ್ಲಿ ಅವ್ವ’ ಎನ್ನುವ ಕವಿತೆ ಸೇರ್ಪಡೆಯಾಗಿದೆ.
ಕಳೆದ ತಿಂಗಳು ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾನಿಲಯದ ಸೋಲ್ಲಾಪುರ್ ಪುಣ್ಯಶ್ಲೋಕ ಅಹಲ್ಯಬಾಯಿ ಹೋಳ್ಕರ್ ವಿಶ್ವವಿದ್ಯಾನಿಲಯಗಳ ಬಿ.ಎ 2ನೇ ಸೆಮ್, ಬಿಕಾಂ 3ನೇ ಸೆಮ್, ಬಿವಿಎ (ಬ್ಯಾಚುಲರ್ ಆಫ್ ವಿಜುವಲ್ ಆರ್ಟ್) 3ನೇ ಸೆಮ್‌ಗಳಿಗೆ ಎರಡು ಗಜಲ್‌ಗಳು ಪಠ್ಯವಾಗಿ ಆಯ್ಕೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.



