ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಕಟ್ಟಡ ನಿರ್ಮಾಣ ಕಾರ್ಮಿಕ ಮಹಾಸಂಘದ ಕಚೇರಿಯಲ್ಲಿ ಪ್ಲಂಬರ್ ಅಸೋಸಿಯೇಶನ್ ಗದಗ-ಬೆಟಗೇರಿ ವತಿಯಿಂದ ವಿಶ್ವ ಪ್ಲಂಬರ್ ದಿನಾಚರಣೆಯನ್ನು ಆಚರಿಸಲಾಯಿತು. ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ. ಜಿ.ಬಿ. ಬಿಡಿನಹಾಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಿಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಹಾಗೂ ತಾವು ಮಾಡುವ ಕೆಲಸದಲ್ಲಿ ಶ್ರದ್ಧೆಯಿಂದ ಮತ್ತು ಜಾಗೂರಕತೆಯಿಂದ ಕೆಲಸವನ್ನು ನಿರ್ವಹಿಸಬೇಕೆಂದು ಕರೆ ನೀಡಿದರು.
ಅತಿಥಿಗಳಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ, ಅಧ್ಯಕ್ಷತೆಯನ್ನು ಪ್ಲಂಬರ್ ಅಸೋಸಿಯೇಶನ್ ಅಧ್ಯಕ್ಷ ಕೆ.ಬಿ. ಕುಡಗುಂಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕನ್ಸಲ್ಟಿಂಗ್ ಸಿವ್ಹಿಲ್ ಇಂಜಿನಿಯರ್ಸ್ ಅಸೋಸಿಯೇಶನ್‌ನ ಜಿಲ್ಲಾಧ್ಯಕ್ಷ ಇಂ.ಎಂ.ಪಿ. ಪಾಟೀಲ, ಸರ್ ಎಂ.ವಿಶ್ವೇಶ್ವರಯ್ಯ ಸಿವಿಲ್ ಕನ್ಸಲ್ಟಂಟ್ ಆ್ಯಂಡ್ ಇಂಜಿನಿರ‍್ಸ್ ಫೋರಮ್‌ನ ಅಧ್ಯಕ್ಷ ಇಂ. ಬೂದೇಶ ಎಂ.ಬ್ಯಾಹಟ್ಟಿ, ಗದಗ ಜಿಲ್ಲಾ ಕಟ್ಟಡ ನಿರ್ಮಾಣ ಕಾರ್ಮಿಕರ ಮಹಾಸಂಘದ ಅಧ್ಯಕ್ಷ ಮೆಹಬೂಬಖಾನ ಪಠಾಣ, ಕಾರ್ಮಿಕರ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಮಹ್ಮದ ಇರ್ಫಾನ ಡಂಬಳ ವೇದಿಕೆಯಲ್ಲಿದ್ದರು.
ಸಂಸ್ಥಾಪಕ ಅಧ್ಯಕ್ಷ ಝಡ್.ಡಿ. ಬೇಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅನಿಲ ಜಾಧವ, ಖಾಜೇಸಾಬ ಗಬ್ಬೂರ, ಶಂಭು ಹರ್ತಿ, ಬಾಲಕೃಷ್ಣ ಕಾಮತ, ಮನೋಜ ಬಾಫಣಾ ಸೇರಿದಂತೆ ಕಾರ್ಯಕಾರಿ ಮಂಡಳಿ ಸದಸ್ಯರಾದ ಇಸ್ಮಾಯಿಲ್ ಹರ್ಲಾಪೂರ, ಮಹ್ಮದಗೌಸ ಡಂಬಳ, ವೆಂಕಟೇಶ ಪೂಜಾರ, ಶಬ್ಬೀರ ಲಕ್ಷ್ಮೇಶ್ವರ ಸಂಗಪ್ಪ ಕೋಳೂರ, ಇಸ್ಮಾಯಲ್ ಹಾರೋಗೇರಿ, ಈರಣ್ಣ ಲಕ್ಕುಂಡಿ, ಗುರುಸಂಗಪ್ಪ ಬೆಣಕಲ್ಲ ಉಪಸ್ಥಿತರಿದ್ದರು. ನಾಸೀರ ಚಿಕ್ಕನಕೊಪ್ಪ ಕಾರ್ಯಕ್ರಮ ನಿರೂಪಿಸಿದರು.