HomeGadag Newsಸಮಾಜ ಬಾಂಧವರು ಪಾಲ್ಗೊಂಡು ಯಶಸ್ವಿಗೊಳಿಸಿ

ಸಮಾಜ ಬಾಂಧವರು ಪಾಲ್ಗೊಂಡು ಯಶಸ್ವಿಗೊಳಿಸಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಜೂನ್ 15ರಂದು ಬೆಳೆಗ್ಗೆ 9.30 ಗಂಟೆಗೆ ನಗರದ ವಿಜಯನಗರ ಬಡಾವಣೆಯಲ್ಲಿರುವ ವಿಶ್ವಕರ್ಮ ಸಮುದಾಯ ಭವನದಲ್ಲಿ ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅಂಗ ಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತಿರುವ 7ನೇ ವರ್ಷದ ಸಮಾಜದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ಕಲಿಕಾ ಸಾಮಗ್ರಿಗಳ ವಿತರಣೆ, ವಿಶ್ವಕರ್ಮ ನೌಕರಶ್ರೀ, ವಿಶ್ವಕರ್ಮ ಸಾಧಕಶ್ರೀ ಪ್ರಶಸ್ತಿ ಪ್ರದಾನ ಹಾಗೂ ಸಂಘದ ನಿವೃತ್ತ ನೌಕರ ಸದಸ್ಯ ದಂಪತಿಗಳ ಸನ್ಮಾನ ಮತ್ತು ಶ್ರೀ ವಿಶ್ವಕರ್ಮ ಸಮುದಾಯ ಭವನ, ವಿದ್ಯಾರ್ಥಿ ವಸತಿ ನಿಲಯಗಳ ಕಟ್ಟಡಕ್ಕೆ ದೇಣಿಗೆ ನೀಡಿದ ಮಹಾದಾನಿಗಳ ಭಾವಚಿತ್ರ ಅನಾವರಣ ಕಾರ್ಯಕ್ರಮಕ್ಕೆ ಸಮಸ್ತ ಸಮಾಜ ಬಾಂಧವರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ ಡಿ.ಕಡ್ಲಿಕೊಪ್ಪ ಹೇಳಿದರು.

ಅವರು ನಗರದ ವಿಶ್ವಕರ್ಮ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಗಣನೀಯ ಸಾಧನೆ ಮಾಡಿದ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದೊಂದಿಗೆ ಕಲಿಕಾ ಸಾಮಗ್ರಿಗಳ ವಿತರಣೆ ನಡೆಯಲಿದೆ. ಸಮಾರಂಭದ ಸಾನ್ನಿಧ್ಯವನ್ನು ಇಳಕಲ್-ಕೂಡಲಸಂಗಮ ಶ್ರೀಮತ್ ಆನೇಗುಂದಿ ಪಂಚ ಸಿಂಹಾಸನ ಸರಸ್ವತಿ ಪೀಠ, ವಿಶ್ವಕರ್ಮ ಬ್ರಹ್ಮಾಂಡಭೇರಿಮಠದ ಶ್ರೀ ವಿಶ್ವನಾಥ ಮಹಸಾಮೀಜಿ, ಶಿರೋಳ ಶ್ರೀ ಯಚ್ಚರಸ್ವಾಮಿ ಗವಿಮಠದ ಶ್ರೀ ಅಭಿನವ ಯಚ್ಚರ ಮಹಾಸ್ವಾಮೀಜಿ ಹಾಗೂ ಶಿರಗುಪ್ಪ ಕರಸ್ಥಳ ನಾಗಲಿಂಗಸ್ವಾಮಿ ಮಠ ಉಪ್ಪಾರಹಳ್ಳಿಯ ಶ್ರೀ ಸುರೇಂದ್ರಸ್ವಾಮೀಜಿ ವಹಿಸುವರು ಎಂದರು.

ಶಾಸಕರು ಹಾಗೂ ಮಾಜಿ ಸಚಿವ ಸಿ.ಸಿ. ಪಾಟೀಲ ಸಮಾರಂಭವನ್ನು ಉದ್ಘಾಟಿಸುವರು. ಕಟ್ಟಡದ ಮಹಾದಾನಿಗಳ ಭಾವಚಿತ್ರ ಅನಾವರಣವನ್ನು ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ. ಸಂಕನೂರ ನೆರವೇರಿಸುವರು. ಸಮಾರಂಭದ ಅಧ್ಯಕ್ಷತೆಯನ್ನು ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ ಡಿ.ಕಡ್ಲಿಕೊಪ್ಪ ವಹಿಸುವರು. ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ, ಶಿರಹಟ್ಟಿ ತಹಸೀಲ್ದಾರ ಅನಿಲ ಬಡಿಗೇರ ಹಾಗೂ ಲಕ್ಷ್ಮೇಶ್ವರ ತಹಸೀಲ್ದಾರ ವಾಸುದೇವ ವಿ.ಸ್ವಾಮಿ ಆಗಮಿಸುವರು. ಶಿರಸಂಗಿ ವಿಶ್ವಕರ್ಮ ಪ್ರತಿಷ್ಠಾನ ಅಧ್ಯಕ್ಷ ಮೋಹನ ಎಸ್.ಸುಳ್ಳದ ಹಾಗೂ ಕಲಘಟಗಿಯ ಉದ್ಯಮಿ ಶ್ರೀಶೈಲ ಶ.ಸುತಾರ ಅವರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡುವರು ಎಂದು ತಿಳಿಸಿದರು.

ಗಜೇಂದ್ರಗಡದ ವರುಣಕುಮಾರ ಮ.ಬಡಿಗೇರ, ಗದುಗಿನ ಆನಂದ ಕಮ್ಮಾರ, ಹೊಂಬಳದ ಕೆ.ಡಿ. ಬಡಿಗೇರ, ನರೇಗಲ್ಲದ ದೇವೇಂದ್ರಪ್ಪ ನಿ.ಕಮ್ಮಾರ, ಮಾಗಡಿಯ ಬಸವರಾಜ ಪಿ.ಕಮ್ಮಾರ, ಸೂಡಿಯ ಈಶ್ವರಪ್ಪ ವೀ.ಅಕ್ಕಸಾಲಿಗರ ಇವರು ನಿವೃತ್ತರಾದ ನಿಮಿತ್ತ ಸನ್ಮಾನಿಸಲಾಗುವುದು. ವಿಶ್ವಕರ್ಮ ಭವನ ಹಾಗೂ ವಿದ್ಯಾರ್ಥಿ ವಸತಿ ನಿಲಯ ಕಟ್ಟಡಗಳ ಸಹಾದಾನಿಗಳಾದ ಶಿವಾನಂದ ಹೊಂಬಳ, ಡಾ. ಪಿ.ಡಿ. ಪತ್ತಾರ, ನಿರಂಜನ ಬಡಿಗೇರ, ಡಾ. ಪದ್ಮಾವತಿ ಪತ್ತಾರ, ಆಯ್.ಈ. ಬಡಿಗೇರ, ಅರುಣ ಸುಳ್ಳದ, ಎಸ್.ಈ. ಅರ್ಕಸಾಲಿ, ರಮೇಶ ಬಡಿಗೇರ ಇವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಡಾ. ಸಿ.ವಿ. ಬಡಿಗೇರ, ಪದಾಧಿಕಾರಿಗಳಾದ ಕೆ.ಎಸ್. ಬಡಿಗೇರ, ವಿ.ವಿ. ರಾಜನಾಳ, ಶಂಕರ್ ಕಂಚಗಾರ, ಡಾ. ಗಿರೀಶ ಬಡಿಗೇರ, ಮಹೇಶ ಕಮ್ಮಾರ ಸೇರಿದಂತೆ ಗಣ್ಯರು ಹಾಜರಿದ್ದರು.

ನಿವೃತ್ತರಾದ ಪ್ರಾಚಾರ್ಯ ಶಶಿಧರ ಗ.ಅರ್ಕಸಾಲಿ, ರಾಜ್ಯ ಉಗ್ರಾಣ ನಿಗಮದ ಬಸಪ್ಪ ಬಿ.ಬಡಿಗೇರ, ಕೆವಿಜಿ ಬ್ಯಾಂಕ್ ಸಿಬ್ಬಂದಿ ಎಮ್.ವಿ. ಸೂಡಿ ಹಾಗೂ ಕೆಸಿಸಿ ಬ್ಯಾಂಕ್ ಸಿಬ್ಬಂದಿ ಸುಭಾಷ ವಿ.ಅಕ್ಕಸಾಲಿಗರ ಅವರಿಗೆ `ವಿಶ್ವಕರ್ಮ ನೌಕರಶ್ರೀ’ ಪ್ರಶಸ್ತಿ ನೀಡಲಾಗುವುದು. ಮಾನಪ್ಪ ಮ.ಬಡಿಗೇರ, ತುಂಗಮ್ಮ ವಿ.ಪತ್ತಾರ, ರಾಘವೇಂದ್ರ ನಿ.ಬಡಿಗೇರ ಹಾಗೂ ಶಂಕ್ರಪ್ಪ ಕಾ.ಬಡಿಗೇರ ಅವರಿಗೆ `ವಿಶ್ವಕರ್ಮ ಸಾಧಕಶ್ರೀ’ ಪ್ರಶಸ್ತಿ ನೀಡಲಾಗುವುದು ಎಂದು ರಾಜಗೋಪಾಲ ಡಿ.ಕಡ್ಲಿಕೊಪ್ಪ ತಿಳಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!