ಕನ್ನಡ ಬಿಗ್ ಬಾಸ್ ಸೀಸನ್ ಹನ್ನೆರಡು ಆರಂಭವಾಗಿ ಕೆಲವೇ ದಿನಗಳು ಕಳೆದಿದೆ. ದೊಡ್ಮನೆಯಲ್ಲಿ ದಿನದಿಂದ ದಿನಕ್ಕೆ ಸ್ಪರ್ಧಿಗಳ ನಡುವಿನ ಪೈಪೋಟಿ ಬಿರುಸುಗೊಳ್ತಿದೆ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದ ಮಲ್ಲಮ್ಮ ಫಿನಾಲೆಗೆ ಆಯ್ಕೆಯಾಗಿದ್ದಾರೆ.
ದೊಡ್ಮನೆಯಲ್ಲಿ ಘಟಾನುಘಟಿ ಸ್ಪರ್ಧಿಗಳ ಮಧ್ಯೆ ಹಳ್ಳಿಯಿಂದ ಬಂದ ಮಲ್ಲಮ್ಮ ಸಾಕಷ್ಟು ಮುಗ್ಧರು. ಬಿಗ್ ಬಾಸ್ ನಿಯಮಗಳನ್ನು ಅರ್ಥ ಮಾಡಿಕೊಳ್ಳಲು ಅವರು ಕಷ್ಟಪಡುತ್ತಾರೆ. ಆದರೂ ಕೂಡ ಮಲ್ಲಮ್ಮ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದಾರೆ. ಮೊನ್ನೆಯಷ್ಟೇ ಮೂರನೇ ವಾರಕ್ಕೆ ಒಂದು ಫಿನಾಲೆ ನಡೆಯಲಿದೆ ಎಂದು ಬಿಗ್ಬಾಸ್ ಘೋಷಣೆ ಮಾಡಿದ್ದರು. ಇದೀಗ ಮಲ್ಲಮ್ಮ ಮೊದಲ ಫಿನಾಲೆಗೆ ಆಯ್ಕೆಯಾಗಿದ್ದಾರೆ.
ಒಂಟಿಗಳ ಜೊತೆ ಚರ್ಚೆ ನಡೆಸಿದ ಬಳಿಕ ಅಶ್ವಿನಿ ಗೌಡ ಅವರು ನಿರ್ಧಾರ ಪ್ರಕಟಿಸಿದರು. ‘ನಮ್ಮೆಲ್ಲರಿಗೂ ಫಿನಾಲೆಗೆ ಹೋಗುವ ಭರವಸೆ ಇದೆ. ಎಲ್ಲರೂ ಸೇರಿ ನಾವು ಒಮ್ಮತದಿಂದ ಮಲ್ಲಮ್ಮ ಅವರನ್ನು ಸೇವ್ ಮಾಡುತ್ತಿದ್ದೇವೆ’ ಎಂದು ಹೇಳಿದರು. ಅಂದರೆ ಸಿಂಪಥಿ ಕಾರಣದಿಂದಲೇ ಮಲ್ಲಮ್ಮ ಅವರಿಗೆ ಈ ಸ್ಥಾನವನ್ನು ನೀಡಲಾಗಿದೆ ಎಂಬುದು ಸ್ಪಷ್ಟವಾಗಿದೆ.



