ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಗದಗ ತಾಲೂಕು ಉಣ್ಣೆ ಔದ್ಯೋಗಿಕ ಉತ್ಪಾದಕರ ಸಂಘದ ನೂತನ ಅಧ್ಯಕ್ಷರಾಗಿ ತಾ.ಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಉಮಚಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
Advertisement
ಸಂಘದ ಆಡಳಿತ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೊಟ್ರಪ್ಪ ಬೆನ್ನಳ್ಳಿ ಉಪಾಧ್ಯಕ್ಷರಾಗಿ ಆಯ್ಕೆಯಾದರು. ರವಿರಾಜ ಕಟಿಗ್ಗಾರ, ಮಂಜುನಾಥ ಕರಿಯಲ್ಲಪ್ಪನವರ, ಫಕ್ಕೀರಪ್ಪ ಬಾಳಿಕಟ್ಟಿ, ಹನಮಂತಪ್ಪ ಗಾಜಿ, ರಾಘವೇಂದ್ರ ವಿಠೋಜಿ, ಶರಣಪ್ಪ ಭಜಂತ್ರಿ, ಶಾರದಾ ತೋಫಿನ, ರೇಣುಕಾ ಗರ್ಜಪ್ಪನವರ, ಮಲ್ಲೇಶ ಬಿನ್ನಾಳ, ಕೇಶವ ಗುದಗಿ, ಸುಭಾಷ ಸತ್ಯಣ್ಣವರ, ನಾಗರಾಜ ಖಂಡು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಹನುಮಂತಪ್ಪ ವಿಠೋಜಿ, ಮಂಜುನಾಥ ಕಟಿಗ್ಗಾರ, ಅಂಕಲೆಪ್ಪ ಬಾಳಿಕಟ್ಟಿ, ಅರವಿಂದ ತೋಫಿನ, ಶ್ರೇಯಾ ಕಟಿಗ್ಗಾರ, ಹನುಮಂತಪ್ಪ ಬಂಗಾರಿಯವರ, ಗುರುರಾಜ ವಿಠೋಜಿ ಉಪಸ್ಥಿತರಿದ್ದರು ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶರಣಪ್ಪ ಗರ್ಜಪ್ಪನವರ ತಿಳಿಸಿದ್ದಾರೆ.