ಚಿಕ್ಕಮಗಳೂರು:- ವ್ಯಕ್ತಿಯೋರ್ವರು ಚಿಕ್ಕಮಗಳೂರು SP ಕಚೇರಿ ಎದುರೇ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿದ ಘಟನೆ ಜರುಗಿದೆ.
Advertisement
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಆಲ್ದೂರು ಪಟ್ಟಣದ ಖಾಲಿದ್ ಹುಸೇನ್ ಎಂದು ಗುರುತಿಸಲಾಗಿದೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಕೂಡಲೇ ಖಾಲಿದ್ ಹುಸೇನ್ ಅವರನ್ನು ಚಿಕ್ಕಮಗಳೂರಿನ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆಲ್ದೂರು ಪೊಲೀಸ್ ಠಾಣೆಯ ASI ಶಿವಕುಮಾರ್ ಕಿರುಕುಳ ನೀಡಿದ್ದು, ಹೀಗಾಗಿ ನ್ಯಾಯ ಕೊಡಿಸುವಂತೆ ಈ ವ್ಯಕ್ತಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರೇ ವಿಷ ಸೇವಿಸಿದ್ದಾರೆ ಎಂದು ತಿಳಿದು ಬಂದಿದೆ.