ಮಂಡ್ಯ: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಅಟ್ಟುವನಹಳ್ಳಿ ಗ್ರಾಮದಲ್ಲಿ 55 ವರ್ಷದ ಪುಟ್ಟಸ್ವಾಮಿ ಎಂಬ ವ್ಯಕ್ತಿ ಎದೆಉರಿ ಎಂದು ಬಿಸಿನೀರು ಕುಡಿಯುವ ವೇಳೆ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.
Advertisement
ಮೃತ ಪುಟ್ಟಸ್ವಾಮಿ ಅವರು ಇಂದು ಬೆಳಗ್ಗೆ ತಮ್ಮ ಜಮೀನಿಗೆ ತೆರಳಿ ಮೇಕೆಗಳಿಗೆ ಮೇವು ತರಿಸಿ ಮನೆಯತ್ತ ಮರಳಿದ್ದರು. ಈ ವೇಳೆ ಅವರಿಗೆ ಎದೆ ಉರಿಯುತ್ತಿರುವಂತೆ ಅನುಭವವಾಗಿದ್ದು, ಬಿಸಿನೀರು ಕೇಳಿದ್ದಾರೆ. ಆದರೆ ಬಿಸಿನೀರು ಕುಡಿಯುವಾಗಲೇ ಅವರು ಏಕಾಏಕಿ ಎದೆ ಹಿಡಿದುಕೊಂಡು ಕುಸಿದು ಬಿದ್ದಿದ್ದಾರೆ.
ನಂತರ ಮನೆಯವರು ಪುಟ್ಟಸ್ವಾಮಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.