ಬೆಂಗಳೂರು: ಹೃದಯಘಾತದಿಂದ ಕಾರಿನಲ್ಲೆ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ನಡೆದಿದೆ. ಅಶ್ವಿನ್ ಕುಮಾರ್ (೪೨) ಮೃತ ವ್ಯಕ್ತಿಯಾಗಿದ್ದು,
Advertisement
ಕೊಡಿಗೆಹಳ್ಳಿ ಬ್ರಿಡ್ಜ್ ಸಮೀಪದ ಖಾಸಗಿ ಆಸ್ಪತ್ರೆ ಮುಂಭಾಗ ಅಶ್ವಿನ್ ಕುಮಾರ್ ಮೃತದೇಹ ಕಾರಿನಲ್ಲಿ ಶವವಾಗಿ ಪತ್ತೆಯಾಗಿದೆ. ಸ್ಥಳಕ್ಕೆ ಕೊಡಿಗೆಹಳ್ಳಿ ಪೊಲೀಸರು ಹಾಗೂ ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತ ಅಶ್ವಿನ್ ಕುಮಾರ್ ಮುತ್ಯಾಲ ನಗರದ ನಿವಾಸಿಯಾಗಿದ್ದು, ಕೋಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲು ಮಾಡಲಾಗಿದೆ.