ವಿಜಯಸಾಕ್ಷಿ ಸುದ್ದಿ, ಗದಗ: ಮಡಿವಾಳ ಮಾಚಿದೇವರ ಮೂರ್ತಿ ಹಾಗೂ ವಚನ ಪಲ್ಲಕ್ಕಿ ಉತ್ಸವ, ಜಗದ್ಗುರು ಶ್ರೀ ಮಾಚಿದೇವ ಮಹಾಸಂಸ್ಥಾನ ಮಠ ಚಿತ್ರದುರ್ಗ ಕಾಯಕ ಜನೋತ್ಸವ-2026 ಕಾರ್ಯಕ್ರಮವು ಚಿತ್ರದುರ್ಗದಲ್ಲಿ 2026ರ ಜನವರಿ 5ರಂದು ನೆರವೇರುವುದು. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾಕೇಂದ್ರಗಳಲ್ಲಿ ಶ್ರಾವಣ ಮಾಸದ ನಿಮಿತ್ತ ವಿಶೇಷ ಕಾರ್ಯಕ್ರಮ ಜರುಗುತ್ತಿದೆ.
ತನ್ನಿಮಿತ್ತ ಮಂಗಳವಾರ ಜಗದ್ಗುರು ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಚಿತ್ರದುರ್ಗದ ಜಗದ್ಗುರು ಡಾ. ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳು ಉದ್ಘಾಟಿಸಿ ಮಾತನಾಡಿ, ಮಡಿವಾಳ ಸಮಾಜವು ಎಲ್ಲಾ ಸಮಾಜಕ್ಕಿಂತ ಚಿಕ್ಕದಾಗಿದ್ದು, ತುಳಿತಕ್ಕೆ ಒಳಗಾಗಿದೆ. ಸಮಾಜ ಬಾಂಧವರು ಒಂದುಗೂಡಿ ಸರ್ಕಾರದ ಯೋಜನೆಗಳನ್ನು ಪಡೆದುಕೊಂಡು ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬೇಕು. ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂದು ಹಕ್ಕೊತ್ತಾಯ ಮಾಡುವ ಕುರಿತು ಮುಂಬರುವ ದಿನಗಳಲ್ಲಿ ಚಿತ್ರದುರ್ಗದಲ್ಲಿ ಬೃಹತ್ ಸಮಾವೇಶವನ್ನು ನಡೆಸಲು ಉದ್ದೇಶಿಸಲಾಗಿದೆ. ಕಾರಣ, ಗದಗ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಂಚರಿಸಿ ಮನೆ ಮನೆಗೆ ತೆರಳಿ ಆಹ್ವಾನ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಎಂ.ಕೆ. ಹನಮಂತಪ್ಪ, ದುರಗೇಶ ಮಡಿವಾಳರ, ಫಕ್ಕೀರಪ್ಪ ಮಡಿವಾಳರ, ಶಿವಪ್ಪ ಮಡಿವಾಳರ, ದ್ಯಾಮಣ್ಣ ಮಡಿವಾಳರ, ನಿಂಬಣ್ಣ ಮಡಿವಾಳರ, ದೇವಪ್ಪ ಮಡಿವಾಳರ, ಜಗದೀಶ ಮಡಿವಾಳರ, ರಾಘವೇಂದ್ರ ಮಡಿವಾಳರ, ಕವಿತಾ ಮಡಿವಾಳರ ಸೇರಿದಂತೆ ಗದಗ-ಬೆಟಗೇರಿ, ಮಡಿವಾಳ ಸಮಾಜದ ಗುರು-ಹಿರಿಯರು, ಯುವಕರು ಉಪಸ್ಥಿತರಿದ್ದರು.