ಮಂಡ್ಯ: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಗ್ರಾಮದಲ್ಲಿ 11 ತಿಂಗಳ ಬಂಡೂರು ಕುರಿ 1,35,000 ರೂಪಾಯಿಗಳ ದಾಖಲೆ ಮೊತ್ತದಲ್ಲಿ ಮಾರಾಟವಾಗಿದೆ.
ಕುರಿ ಮಾರಾಟವು ಯುವ ರೈತ ಉಲ್ಲಾಸ್ಗೌಡಗೆ ಸೇರಿದ ಬಂಡೂರು ಟಗರನ್ನು ಬೆಂಗಳೂರು ಮೂಲದ ಇಂಜಿನಿಯರ್ ಹರೀಶ್ ಖರೀದಿ ಮಾಡಿದ್ದು, ಈ ಮೊತ್ತವನ್ನು ಉಲ್ಲಾಸ್ಗೆ ಹಣವಾಗಿ ನೀಡಲಾಯಿತು. ಬಳಿಕ ಬಂಡೂರು ಟಗರನ್ನು ಹರೀಶ್ ಅವರಿಗೆ ಹಸ್ತಾಂತರಿಸಲಾಗಿದೆ.
ಕುರಿ ಸಾಕಾಣಿಕೆ ಮಾಡುತ್ತಿರುವ ಹರೀಶ್ ಬಂಡೂರು ತಳಿಯನ್ನು ಅಭಿವೃದ್ಧಿಪಡಿಸಲು ಉಲ್ಲಾಸ್ ಬಳಿ ಬಂಡೂರು ಟಗರನ್ನು ಖರೀದಿ ಮಾಡಿದ್ದು, ಬಳಿಕ ಉಲ್ಲಾಸ್‌ಗೆ ಹಣ ನೀಡಿ ಸನ್ಮಾನ ಮಾಡಿದ್ದಾರೆ. ನಂತರ ಬಂಡೂರು ಟಗರನ್ನು ಹರೀಶ್ ಅವರಿಗೆ ಹಸ್ತಾಂತರ ಮಾಡಲಾಗಿದೆ.



