ಮಂಡ್ಯ:- 21ರ ಇಂಜಿನಿಯರ್ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಜಿಲ್ಲೆಯ ಕೆಆರ್‌ಪೇಟೆ ತಾಲೂಕಿನ ಕರೋಟಿ ಗ್ರಾಮದಲ್ಲಿ ಜರುಗಿದೆ.
Advertisement
21 ವರ್ಷದ ನವೀನ್ ಮೃತ ವಿದ್ಯಾರ್ಥಿ. ನವೀನ್ ಬೆಂಗಳೂರಿನ ಕಾಲೇಜುವೊಂದರಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ. ರಜೆ ಇದ್ದ ಹಿನ್ನೆಲೆ ಮನೆಗೆ ಬಂದಿದ್ದ. ಮಂಗಳವಾರ ಮನೆಯಲ್ಲಿ ಇರುವಾಗ ಹಠಾತ್ ಹೃದಯಾಘಾತವಾಗಿ ನವೀನ್ ಕುಸಿದು ಬಿದ್ದಿದ್ದಾನೆ.
ತಕ್ಷಣ ಪೋಷಕರು ಕಿಕ್ಕೇರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಕಿಕ್ಕೇರಿ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಚನ್ನರಾಯಪಟ್ಟಣಕ್ಕೆ ಕರೆದುಕೊಂಡು ಹೋಗಲು ಹೇಳಿದ್ದಾರೆ. ಬಳಿಕ ಚನ್ನರಾಯಪಟ್ಟಣಕ್ಕೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆ ನವೀನ್ ಸಾವನ್ನಪ್ಪಿದ್ದಾನೆ.