RCB ಅನ್ನೋದು ಅದೊಂದು ಹೆಸರಲ್ಲ ಮರ್ರೆ ಎಮೋಷನಲ್. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ IPL ನಲ್ಲಿ ಇದುವರೆಗೂ ಒಂದು ಟ್ರೋಫಿ ಗೆದ್ದಿಲ್ಲ. ಆದ್ರೂ ಅಭಿಮಾನಿಗಳ ಕ್ರೇಜ್ ಎಂದೂ ಕಮ್ಮಿ ಆಗಿಲ್ಲ.
ಫೀಲ್ಡ್ ನಲ್ಲಿ RCB ಫ್ಯಾನ್ಸ್ ಕೊಡೋ ಎನರ್ಜಿ ನೆಕ್ಸ್ಟ್ ಲೆವೆಲ್. ಇದು ಯಾವ ತಂಡದ ಅಭಿಮಾನಿಗಳಿಂದಲೂ ಸಾಧ್ಯವಾಗಿಲ್ಲ. ಸೋತರೂ, ಗೆದ್ದರೂ ಒಂದೇ ಕ್ರೇಜ್ ಹೊಂದಿರುವ ಅವರು, ಈ ಸಲ ಕಪ್ ನಮ್ದೆ ಎನ್ನುವ ಘೋಷಣೆ ಮಾತ್ರ ನಿಲ್ಲಿಸಿಲ್ಲ. ಇದು RCB ತಂಡದ ಮೇಲಿನ ಅಭಿಮಾನ ತೋರಿಸತ್ತೆ.
ಆದರೆ 2025 ರ IPL ಹರಾಜು ಬಳಿಕ ಪ್ರಾಂಚೈಸಿ ನಿರ್ಧಾರದ ಬಗ್ಗೆ ಅಭಿಮಾನಿಗಳು ಕೊಂಚ ಬೇಸರ ಮಾಡಿಕೊಂಡಿದ್ದಾರೆ. ಸಾಕಷ್ಟು ಆಟಗಾರರನ್ನು ಹರಾಜಿನಲ್ಲಿ ಖರೀದಿಸದೆ ಬೇರೆ ತಂಡಕ್ಕೆ ಬಿಟ್ಟುಕೊಟ್ಟ ಹಿನ್ನೆಲೆ ಫ್ಯಾನ್ಸ್ ಆಕ್ರೋಶ ಹೊರ ಹಾಕಿದ್ದಾರೆ.
ಹೀಗಾಗಿ, ತಂಡವೂ ನಮ್ಮದೇ, ಕಪ್ಪು ನಮ್ಮದೇ, ಬನ್ನಿ ಆರ್‌ಸಿಬಿ ಮಾಲೀಕತ್ವ ಪಡೆಯೋಣ ಎಂದು ಕರೆ ಕೊಟ್ಟಿದ್ದಾರೆ. ಆಲ್ ಇಂಡಿಯಾ ಆರ್‌ಸಿಬಿ ಫ್ಯಾನ್ಸ್ ಅಸೋಸಿಯೇಷನ್ ವೇದಿಕೆ ಸಿದ್ದವಾಗಿದೆ.
ನೋಂದಣಿಗೆ ವೇದಿಕೆ ಸಿದ್ಧವಾಗಿದೆ. ಆರ್‌ಸಿಬಿ ಮಲೀಕತ್ವ ಪಡೆಯೋಣ ಎಂಬ ಪೋಸ್ಟರ್ ತಯಾರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
10 ಲಕ್ಷ ಆರ್‌ಸಿಬಿ ಅಭಿಮಾನಿಗಳಿಂದ ತಲಾ 10 ಸಾವಿರದಂತೆ ಹಣ ಸಂಗ್ರಹ ಮಾಡೋಣ. ಸಂಗ್ರಹವಾದ 1000 ಕೋಟಿ ಹಣದಲ್ಲಿ ತಂಡದ ಆಟಗಾರರನ್ನು ನಾವೇ ಖರೀದಿಸೋಣ.
ಅಭಿಮಾನಿಗಳ ಮತದಾನದ ಮೂಲಕ ಆಟಗಾರರ ಖರೀದಿ ಮಾಡಿ, ಪ್ರತಿ ಸದಸ್ಯರಿಗೆ ಸೀಸನ್ನಲ್ಲಿ ಆರ್‌ಸಿಬಿ ಆಡುವ ಒಂದು ಪಂದ್ಯವನ್ನು ಉಚಿತವಾಗಿ ವೀಕ್ಷಣೆ ಮಾಡಲು ಅವಕಾಶ ನೀಡೋಣ.
ಅಭಿಮಾನಿಗಳೇ ಬನ್ನಿ ಆರ್‌ಸಿಬಿ ಮಾಲೀಕರಾಗೋಣ ಎಂದು ಆಲ್ ಇಂಡಿಯಾ ಆರ್‌ಸಿಬಿ ಫ್ಯಾನ್ಸ್ ಅಸೋಸಿಯೇಷನ್ ಕರೆ ಕೊಟ್ಟಿದೆ. ತಂಡವನ್ನು ಆಯ್ಕೆ ಮಾಡಲು ಕೈ ಜೋಡಿಸಿ ಎಂದು ಮನವಿ ಮಾಡಿದೆ.
ವೈರಲ್ ಆದ ಪೋಸ್ಟರ್ನಲ್ಲಿ ಏನಿದೆ?
ಹಾಲಿ RCB ಮಾಲೀಕರಿಂದ ತಂಡವನ್ನು ಅಭಿಮಾನಿಗಳ ಸಂಘಕ್ಕೆ ಖರೀದಿ ಮಾಡಿಕೊಳ್ಳುವ ಮಹತ್ವದ ಗುರಿಯನ್ನು ಹೊಂದಲಾಗಿದೆ.
10 ಲಕ್ಷ ಅಭಿಮಾನಿಗಳಿಂದ ತಲಾ 10 ಸಾವಿರ ರೂ. ಹಣವನ್ನು ಚೇರಿನ ರೂಪದಲ್ಲಿ ಸಂಗ್ರಹಿಸುವ ಮೂಲಕ 1000 ಕೋಟಿ ಹಣ ಸಂಗ್ರಹಿಸುವ ಗುರಿ.
ಸಂಗ್ರಹವಾದ ಹಣದಿಂದ RCB ತಂಡದ ಮಾಲೀಕತ್ವವನ್ನು ಅಭಿಮಾನಿಗಳ ಸಂಘವೇ ಖರೀದಿಸಿ ತಂಡದಲ್ಲಿ ಯಾವ್ಯಾವ ಆಟಗಾರರನ್ನು ಆಡಿಸಬೇಕೆಂಬುದನ್ನು ಅಭಿಮಾನಿಗಲೇ ವೋಟ್ ಮೂಲಕ ಆಯ್ಕೆ ಮಾಡಿ ಅಂತಹ ಆಟಗಾರರನ್ನು ನಿಯಮದಂತೆ ಬಿಡ್ಡಿಂಗ್‌ನಲ್ಲಿ ಆಯ್ಕೆ ಮಾಡಿಕೊಳ್ಳುವುದೇ ಸಂಘದ ಉದ್ದೇಶ.
ಅಭಿಮಾನಿಗಳ ಸಂಘದ 1 ಲಕ್ಷ ಸದಸ್ಯರಲ್ಲಿ 10 ಮಂದಿಯನ್ನು 2 ವರ್ಷಕ್ಕೊಮ್ಮೆ ಚುನಾವಣೆಯ ಮೂಲಕ ಆಯ್ಕೆ ಮಾಡಿ ಬಿಡ್ಡಿಂಗ್‌ನಲ್ಲಿ ತಂಡವನ್ನು ಆಯ್ಕೆ ಮಾಡುವ ಅಧಿಕಾರ ನೀಡುವುದು.
ಸಂಘದ ಪ್ರತಿ ಸದಸ್ಯರಿಗೂ ಒಂದು ಬಾರಿ RCB ಆಡುವ ಯಾವುದಾದರೂ ಪಂದ್ಯವನ್ನು ವೀಕ್ಷಿಸಲು ಉಚಿತವಾಗಿ ಅವಕಾಶ ನೀಡಲಾಗುವುದು.
ಆಯ್ಕೆ ಮಂಡಲಿಯ ಬೇಜವಾಬ್ದಾರಿ ವಿರುದ್ಧ ಮಳವಳ್ಳಿ RCB ಅಭಿಮಾನಿಗಳಿಂದ/ ಕ್ರಾಂತಿಕಾರಿ ನಿರ್ಧಾರ. ನಮ್ಮ ತಂಡ. ನಮ್ಮದೇ ಮಾಲೀಕತ್ವ ಎಂದು ಕರೆ ಕೊಟ್ಟಿದ್ದಾರೆ.