ಮಂಡ್ಯ:- ಜಮೀನಿನಲ್ಲಿ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ರೈತನೋರ್ವ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಸಾಗ್ಯ ಗ್ರಾಮದಲ್ಲಿ ಜರುಗಿದೆ.
Advertisement
ಇದೇ ಗ್ರಾಮದ ನಿವಾಸಿ ರಮೇಶ್ (38) ಮೃತ ರೈತ. ಬೆಳಿಗ್ಗೆ ಎಂದಿನಂತೆ ತಮ್ಮ ಜಮೀನಿಗೆ ರಮೇಶ್ ತೆರಳಿದ್ದ. ಈ ವೇಳೆ ತೆಂಗಿನ ಗರಿಗಳನ್ನು ಜಮೀನಿನಿಂದ ಹೊರ ಹಾಕುವ ವೇಳೆ ವಿದ್ಯುತ್ ಶಾಕ್ ಹೊಡೆದಿದೆ. 11 ಕೆವಿ ಸಾಮರ್ಥ್ಯದ ವಿದ್ಯುತ್ ತಂತಿಗಳಿಗೆ ತೆಂಗಿನ ಗರಿ ತಾಗಿ ಈ ದುರಂತ ಸಂಭವಿಸಿದೆ.
ರೈತನ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.


