ಮಂಡ್ಯ:- ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಾಶಿಮುರುಕನಹಳ್ಳಿ ಗ್ರಾಮದಲ್ಲಿ ರೈತನೋರ್ವ ತನ್ನ ಜಮೀನಿನಲ್ಲಿ ಅಡಿಕೆ, ಬಾಳೆ, ತೆಂಗು ಜೊತೆಗೆ ಸಾಲು-ಸಾಲಾಗಿ ಗಾಂಜಾ ಬೆಳೆದಿರುವ ಘಟನೆ ಜರುಗಿದೆ.
ಬೋರೇಗೌಡ ಎಂಬಾತನೇ ಗಾಂಜಾ ಬೆಳೆದ ರೈತ. ಬೋರೇಗೌಡ, ತನ್ನ ಜಮೀನಿನಲ್ಲಿ ಅಡಿಕೆ, ಬಾಳೆ, ತೆಂಗು ಜೊತೆಯಲ್ಲೇ ಗಾಂಜಾ ಗಿಡಗಳನ್ನು ಬೆಳೆದಿದ್ದ. ಇದರ ಖಚಿತ ಮಾಹಿತಿ ಪಡೆದ ಅಬಕಾರಿ ಉಪನಿರೀಕ್ಷಕ ನಾಗಭೂಷಣ್ ತಂಡ ದಾಳಿ ಮಾಡಿದ್ದು, ಈ ವೇಳೆ ಲಕ್ಷ ಮೌಲ್ಯದ 14 ಕೆಜಿ ತೂಕದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದೆ. ಕೆಆರ್‌ಪೇಟೆ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



