ಮಂಡ್ಯ: ರೆಫ್ರಿಜರೇಟರ್ ಸ್ಫೋಟಗೊಂಡು ವಿದ್ಯುತ್ ಉಪಕರಣ ಸೇರಿದಂತೆ ಮನೆಯ ದಾಖಲೆ ಪತ್ರಗಳು ಸುಟ್ಟು ಕರಕಲಾದ ಘಟನೆ ಮಂಡ್ಯ ನಗರದ ಕೆರೆ ಅಂಗಳದಲ್ಲಿ ನಡೆದಿದೆ. ನಗರದ ನಿವಾಸಿ ಶೈಲಜಮ್ಮ ಎಂಬುವವರಿಗೆ ಸೇರಿನ ಮನೆಯಲ್ಲಿ ಸ್ಪೋಟಗೊಂಡಿರುವ ಫ್ರೀಡ್ಜ್ ಆಗಿದ್ದು, ಆದೃಷ್ಟವತ್ ಯಾವುದೇ ಪ್ರಾಣಾ ಹಾನಿ ಸಂಭವಿಸಿಲ್ಲ.
Advertisement
ವರ್ಲ್ ಪೂಲ್ ಕಂಪನಿಯ ಫ್ರೀಡ್ಜ್ ಸ್ಪೋಟಗೊಂಡಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಅವಘಡ ಸಂಭವಿಸಿದ್ದು, ದೊಡ್ಡ ದುರಂತವೊಂದು ತಪ್ಪಿದೆ. ಫ್ರೀಡ್ಜ್ ಸ್ಫೋಟದಿಂದ ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಯಾಗಿದ್ದು, ಮಂಡ್ಯದ ಗಿರಿಯಾಸ್ ಶೋರೂಂ ನಲ್ಲಿ ಖರೀದಿ ಮಾಡಲಾಗಿತ್ತು. ಕಂಪನಿಯ ವಿರುದ್ದ ಪೊಲೀಸ್ ಠಾಣಾಗೆ ದೂರು ನೀಡಿದ್ದು, ಸ್ಥಳಕ್ಕೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.