ಮಂಡ್ಯ: ಕಾಲು ಜಾರಿ ಕೆರೆಗೆ ಬಿದ್ದು ರೈತ ಸಾವನ್ನಪ್ಪಿರುವ ಘಟನೆ ಮಂಡ್ಯ ತಾಲ್ಲೂಕಿನ ಹನಕೆರೆ ಗ್ರಾಮದಲ್ಲಿ ನಡೆದಿದೆ. ಹೆಚ್.ಎಸ್.ಅನಿಲ್ (30) ಮೃತ ರೈತನಾಗಿದ್ದು, ಗದ್ದೆಯಲ್ಲಿ ಭತ್ತದ ನಾಟಿ ಮಾಡಲು ಭೂಮಿ ಹದಗೊಳಿಸಿ ಮನೆಗೆ ತೆರಳುವಾಗ ಕೈ ಕಾಲು ತೊಳೆಯಲು ಕೆರೆಗೆ ಇಳಿದಿದ್ದಾರೆ.
Advertisement
ಬೇಸಿಗೆಯಲ್ಲಿ ಕೆರೆಯಲ್ಲಿ ಮಣ್ಣು ತುಂಬಿ ಗುಂಡಿ ಬಿದ್ದ ಹಿನ್ನೆಲೆ ರೈತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತ ದೇಹ ಸಿಗದ ಹಿನ್ನೆಲೆ ಆಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ದೇಹ ಪತ್ತೆ ಹಚ್ಚಿ ಹೊರ ತೆಗೆದರು. ಮಂಡ್ಯ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿ ಮಂಡ್ಯ ಮಿಮ್ಸ್ ಗೆ ಶವಗಾರಕ್ಕೆ ದೇಹ ರವಾನೆ ಮಾಡಿದರು.